೨೪ರಂದು ಅಂಬೇಡ್ಕರ್ ಜನ್ಮ ದಿನಾಚರಣೆ

Posted on April 21, 2011

0


ಮಂಗಳೂರು: ಸಂವಿಧಾನದ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್‌ರವರ ೧೨೦ನೇ ಜನ್ಮ ದಿನವನ್ನು ಏ.೧೪ರಿಂದ ೧೭ರ ಬುದ್ಧ ಜಯಂತಿ ತನಕ ‘ಪ್ರಬುದ್ಧ ಭಾರತದೆಡೆಗೆ ನಮ್ಮ ನಡಿಗೆ’ಎಂಬ ವಿವಿಧ ರೀತಿಯ ಜನಜಾಗೃತಿ ಕಾರ್ಯ ಕ್ರಮಗಳೊಂದಿಗೆ ಪರಿಣಾಮ ಕಾರಿಯಾಗಿ ನಡೆಸಲು ದಲಿತ ಸಂಘರ್ಷ ಸಮಿತಿ (ಭೀಮವಾದ) ರಾಜ್ಯ ಸಮಿತಿ ನಿರ್ಧರಿಸಿದ್ದು, ಅದರಂತೆ ಸಮಿತಿಯ ದ.ಕ.ಜಿಲ್ಲಾ ಘಟಕದ ಆಶ್ರಯದಲ್ಲಿ ಏ.೨೪ರಂದು ನಗರದ ಮಂಗಳೂರು ವಿ.ವಿ. ಕಾಲೇಜಿನ ರವೀಂದ್ರ ಕಲಾಭವ ನದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗಿದೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಸಮಿತಿ ಸದಸ್ಯ ಪಿ.ಕೇಶವ, ವಿಧಾನ ಪರಿಷತ್ ಸದಸ್ಯ ಡಿ.ಎಸ್. ವೀರಯ್ಯ ಸಮಾರಂಭವನ್ನು ಉದ್ಘಾಟಿ ಸುವರು. ಈ ಸಂದರ್ಭದಲ್ಲಿ ಭೀಮ ವಾದ ಸಂಘಟನೆಯ ಮಾಸಿಕ ಪತ್ರಿಕೆ ಅನಾವರಣಗೊಳ್ಳಲಿದೆ. ಸಮಾಜದ ಸಾಧಕರ ಸನ್ಮಾನವೂ ನಡೆಯಲಿದೆ ಎಂದರು. ಸುಂದರ ನಾಯ್ಕ, ಸೋಮ ನಾಥ ಪುತ್ತೂರು, ಸುರೇಶ್ ಪಿ.ಎಸ್. ಸುದೇಶ್ ಕುಮಾರ್ ಬಜಾಲ್, ಸಂತೋಷ್ ಕುಮಾರ್ ಕೊಲ್ಯ, ದಿನಕರ ಮೂಲ್ಕಿ ಉಪಸ್ಥಿತರಿದ್ದರು.

Advertisements