ಮುಂಬೈ-ದೆಹಲಿ ರಾಜಧಾನಿಗೆ ಬೆಂಕಿ: ಎಲ್ಲಾ ಪ್ರಯಾಣಿಕರು ಸುರಕ್ಷಿತ

Posted on April 18, 2011

0


ರತ್ಲಾಮ್ (ಮಧ್ಯಪ್ರದೇಶ): ೧೨೯೫೧ ಮುಂಬೈ-ದೆಹಲಿ ಮಧ್ಯೆ ಸಂಚರಿಸುವ ರಾಜಧಾನಿ ಎಕ್ಸ್‌ಪ್ರೆಸ್‌ನ ಬೋಗಿಗೆ ಬೆಂಕಿ ಹತ್ತಿಕೊಂಡ ಘಟನೆ ಇಂದು ಬೆಳಿಗ್ಗಿನ ಜಾನ ಸಂಭವಿಸಿದ್ದು, ಎರಡು ಬೋಗಿಗೆ ತೊಂದರೆಯಾಗಿದೆ. ಆದರೆ ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ರೈಲುವೆ ಅಧಿಕಾರಿಗಳು ತಿಳಿಸಿದ್ದಾರೆ.

ರತ್ಲಾಮ್‌ಗೆ ಸಮೀಪದ ಆಲೋಟ್ ಹಾಗೂ ವಿಕ್ರಂಘರ್ ಮಧ್ಯದ ಥರಿಯಾ ಸ್ಟೇಷನ್‌ನಲ್ಲಿ ಈ ಘಟನೆ ಬೆಳಿಗ್ಗೆ ಸುಮಾರು ೨.೨೦ರ ವೇಳೆಗೆ ಸಂಭವಿಸಿದೆ. ಮೊದಲು ಉಗ್ರಾಣದ ಬೋಗಿಗೆ ಬೆಂಕಿ ಹತ್ತಿಕೊಂಡು ನಂತರ ಹತ್ತರಿರದ ಬಿ೬ ಮತ್ತು ಬಿ೭ ಬೋಗಿಗಳಿಗೆ ಬೆಂಕಿ ಪಸರಿಸಿತ್ತು. ಘಟನೆಯಲ್ಲಿ ಉಗ್ರಾಣ ಬೋಗಿ ಸಂಪೂರ್ಣವಾಗಿ ಹಾನಿಯಾಗಿದೆ.
ಬೆಂಕಿಯನ್ನು ನಂದಿಸಲಾಗಿದ್ದು, ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಮತ್ತು ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ಅಲ್ಲದೆ ರೈಲುವೆ ಸಿಬ್ಬಂದಿಗಳ ಸಮಯಪ್ರಜ್ಞೆಯಿಂದ ಬೇರೆ ಬೋಗಿಗಳನ್ನು ಬೇರ್ಪಡಿಸಲಾಗಿದ್ದು, ಇತರೆ ಬೋಗಿಗಳಿಗೆ ಬೆಂಕಿ ಹತ್ತಿಕೊಳ್ಳುವುದು ತಪ್ಪಿದೆ. ರೈಲು ತನ್ನ ಪ್ರಯಾಣವನ್ನು ಮುಂದುವರಿಸಿದ್ದು, ಕೋಟಾ ಮೂಲಕ ದೆಹಲಿ ತಲುಪಲಿದೆ.
ವೈದ್ಯಕೀಯ ತಂಡಗಳು ಸ್ಥಳಕ್ಕಾಗಮಿಸಿದ್ದು, ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಓರ್ವ ಪ್ರಯಾಣಿಕ ಮಹಿಳೆ ಹಾಗೂ ಮಕ್ಕಳನ್ನು ರಕ್ಷಿಸುವ ಭರದಲ್ಲಿ ಗಾಯಗೊಂಡಿದ್ದಾನೆ.
ಘಟನೆಗೆ ಕಾರಣವೇನೆಂಬುದು ಇನ್ನೂ ಖಚಿತಗೊಂಡಿಲ್ಲ. ಘಟನೆಯಲ್ಲಿ ಯಾರೊಬ್ಬರಿಗೂ ತೊಂದರೆಯಾಗದ ಕಾರಣ ತುರ್ತು ಪರಿಹಾರವನ್ನು ಘೋಷಿಸಿದ್ದು, ಬಿ೬ ಮತ್ತು ಬಿ೭ನ ಎಲ್ಲಾ ಪ್ರಯಾಣಿಕರಿಗೆ ತಲಾ ರೂ. ೫,೦೦೦ ರೈಲುವೆ ಪ್ರಾಧಿಕಾರ ಘೋಷಿಸಿದೆ ಎಂದು ರೈಲುವೆ ವಕ್ತಾರ ತಿಳಿಸಿದ್ದಾರೆ.
ರೈಲಿನಲ್ಲಿ ರೈಲು ಸಿಬ್ಬಂದಿಗಳು ಸೇರಿದಂತೆ ಒಟ್ಟು ೯೦೦ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಹಿರಿಯ ರೈಲುವೆ ಅಧಿಕಾರಿಗಳು ಸೇರಿದಂತೆ ತ್ರಿ-ಸದಸ್ಯರನ್ನೊಳಗೊಂಡ ರೈಲುವೆ ತಂಡವನ್ನು ಸ್ಥಳಕ್ಕೆ ಕಳುಹಿಸಿಕೊಡಲಾಗಿದೆ. ತಂಡ ಅರುಣೇಂದ್ರ ಕುಮಾರ್, ಆರ್.ಎನ್. ಲಾಲ್ ಹಾಗೂ ಆಶೀಷ್ ಮಲ್ಹೋತ್ರಾರನ್ನೊಳಗೊಂಡಿದೆ ಎಂದು ವಕ್ತಾರ ತಿಳಿಸಿದ್ದಾರೆ.

Advertisements
Posted in: National News