ಚಾಲಕನಿಲ್ಲದೆ ೨೦ ಕಿ.ಮೀ. ದೂರ ಕ್ರಮಿಸಿದ ರೈಲು

Posted on April 18, 2011

0


ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಖಾಝಿಗಂಡ್‌ನಿಂದ ರೈಲೊಂದು ಸುಮಾರು ೨೦ ಕಿ.ಮೀ. ದೂರವನ್ನು ಚಾಲಕನಿಲ್ಲದೆಯೇ ಚಲಿಸಿದ ಘಟನೆಯನ್ನು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ.
ಇಂದು ಬೆಳಿಗ್ಗೆ ಸುಮಾರು ೨ರ ವೇಳೆಗೆ ಶ್ರೀನಗರದಿಂದ ಸುಮಾರು ೭೫ ಕಿ.ಮೀ. ದೂರದಿಂದ ಪ್ರಯಾಣ ಆರಂಭಿಸಿದ ರೈಲು ಅನಂತ್‌ನಾಗ್ ಕಡೆ ಹೊರಟು ಸುಮಾರು ೨೦ ಕಿ.ಮೀ. ದೂರದ ಖಾಝಿಗಂಡ್‌ನಲ್ಲಿ ನಿಂತಿತು. ಆಳವಾದ ಇಳಿಜಾರಿನಲ್ಲಿ ರೈಲು ನಿಂತಿರುವ ಬಗ್ಗೆ ಕಚೇರಿ ಮೂಲಗಳು ತಿಳಿಸಿವೆ.

ರೈಲುವೆ ಸಿಬ್ಬಂದಿ ಹಾಗೂ ರಕ್ಷಣಾ ಸಿಬ್ಬಂದಿಗಳ ಗಮನಕ್ಕೆ ಬಾರದೆ ರೈಲು ೨೦ ಕಿ.ಮೀ. ದೂರ ಕ್ರಮಿಸಿರುವ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಘಟನೆ ಬಗ್ಗೆ ಪ್ರತಿಕ್ರಿಯಿಸಲು ರೈಲುವೆ ಅಧಿಕಾರಿಗಳು ನಿರಾಕರಿಸಿದ್ದಾರೆ.

Advertisements
Posted in: National News