ಲಾರಿ-ರಿಕ್ಷಾ ಡಿಕ್ಕಿ: ಗಾಯ

Posted on April 16, 2011

0


ಪಡುಬಿದ್ರಿ: ಕಟಪಾಡಿ ರಾ.ಹೆದ್ದಾರಿ ೧೭ರ ಮೂಡುಬೆಟ್ಟು ಕಲ್ಲಾಪು ಬಳಿಯ ತಿರುವಿನಲ್ಲಿ ಹೆದ್ದಾರಿಗೆ ಬರುತ್ತಿದ್ದ ರಿಕ್ಷಾವೊಂದಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ತೀವ್ರ ಗಾಯಗೊಂಡು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖ ಲಾಗಿದ್ದಾರೆ. ಕಟಪಾಡಿ ಕೋಟೆ ಗ್ರಾಮದ ಇಂದಿರಾ ನಗರದ ರಾಜೇಶ್‌ಗಾಯ ಗೊಂಡ ವರು. ಕಟಪಾಡಿಯಿಂದ ಪಾಂಗಾಳಕ್ಕೆಂದು ಒಳ ರಸ್ತೆಯಲ್ಲಿ ಬಂದು ಹೆದ್ದಾರಿಗೆ ಪ್ರವೇಶಿಸುವಾಗ ವಿರುದ್ಧ ದಿಕ್ಕಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡ ರಾಜೇಶ್‌ರನ್ನು ಸ್ಥಳಿಯರು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Posted in: Crime News