ಲಾರಿ ಬೆಂಕಿಗಾಹುತಿ

Posted on April 16, 2011

0


ಮುಲ್ಕಿ: ಬೈಕಂಪಾಡಿಯಿಂದ ಪೈಂಟ್ ಹಾಗೂ ಕಂಪ್ರೆಸ್ಸರ್ ಅನ್ನು ಹುಬ್ಬಳ್ಳಿಗೆ ಸಾಗಿಸುತ್ತಿದ್ದ ಲಾರಿಗೆ ಆಕಸ್ಮಿಕವಾಗಿ ಬೆಂಕಿ ತಗಲಿದ ಪರಿಣಾಮ ಸಂಪೂರ್ಣ ಭಸ್ಮವಾಗಿ, ಅದರಲಿದ್ದ ವರು ಪಾರಾಗಿದ್ದಾರೆ.

ನಿನ್ನೆ ಸಂಜೆ ವೇಳೆ ೩೦೦ ಲೀ ಪೈಂಟ್ ಹಾಗೂ ಒಂದು ಕಂಪ್ರೆಸ್ಸರ್ ಅನ್ನು ಹುಬ್ಬಳ್ಳಿಗೆ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಲಾರಿಯ ಹಿಂಬದಿ ಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂ ಡಿತು. ಹಿಂದೆ ಇದ್ದವರು ಚಾಲಕನ ಗಮನಕ್ಕೆ ತಂದಿದ್ದರಿಂದ ಚಾಲಕ ಕೂಡಲೇ ಲಾರಿಯನ್ನು ಮುಕ್ಕ ರಾ.ಹೆ ಬಳಿಯಲ್ಲಿ ನಿಲ್ಲಿಸಿದ್ದಾನೆ. ಅಷ್ಟರಲ್ಲಿ ಬೆಂಕಿ ಸಂಪೂರ್ಣ ಲಾರಿಗೆ ವ್ಯಾಪಿಸಿತ್ತು. ಘಟನೆಯಿಂದ ಲಾರಿಯೊಳಗಿದ್ದ ಎಲ್ಲಾ ವಸ್ತುಗಳು ಭಸ್ಮವಾಗಿ ಲಕ್ಷಾಂತರ ರೂ ನಷ್ಟ ಸಂಭವಿಸಿದೆ. ಸ್ಥಳಕ್ಕೆ ಧಾವಿಸಿದ ಮಂಗಳೂರು ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸುವ ಕಾರ‍್ಯಾಚರಣೆಯಿಂದಾಗಿ ಒಂದು ಗಂಟೆಗಳ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಚಾಲಕ ಹುಬ್ಬಳ್ಳಿಯ ಮಲ್ಲಪ್ಪ ನೀಡಿದ ದೂರಿನ ಆಧಾರದಲ್ಲಿ ಅಗ್ನಿ ಶಾಮಕ ದಳದವರು ಪ್ರಕರಣ ದಾಖಲಿಸಿದ್ದಾರೆ.

Posted in: Udupi District