ಯುವತಿಯರ ಮೊಬೈಲ್ ನಂಬರ್ ಪಡೆಯುತ್ತಿದ್ದ ಯುವಕನ ಸೆರೆ

Posted on April 16, 2011

0


ಮಂಗಳೂರು: ಯುವತಿಯರಿಗೆ ಮೊಬೈಲ್ ನಂಬರ್ ಬರೆದು ಕೊಟ್ಟು ಅವರ ನಂಬರ್ ಪಡೆಯುತ್ತಿದ್ದ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುವ ಯುವಕನೋರ್ವನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.

ಇತ್ತೀಚೆಗಷ್ಟೇ ಪ್ಲಸ್ ಟು ಪರೀಕ್ಷೆ ಮುಗಿಸಿ ರಜೆಯಲ್ಲಿ ಬಟ್ಟೆ ಅಂಗಡಿಯಲ್ಲಿ ಸೇಲ್ಸ್‌ಮನ್ ಕೆಲಸ ಮಾಡುತ್ತಿದ್ದ ಯುವಕ ಅಂಗಡಿಗೆ ಬರುವ ಯುವತಿಯರಿಗೆ ತನ್ನ ನಂಬರ್ ನೀಡುತ್ತಿದ್ದನೆನ್ನಲಾಗಿದ್ದು, ಈ ಬಗ್ಗೆ ಬಂದ ದೂರನ್ನು ಆದರಿಸಿ ಆತನನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಆತನ ಮೊಬೈಲ್ ಪರಿಶೀಲಿಸಿದಾಗ ಅದರಲ್ಲಿ ನೂರಾರು ಯುವತಿಯರ ನಂಬರ್ ಇರುವುದು ಪತ್ತೆಯಾಯಿತು.

ಯುವತಿಯರನ್ನು ವಶೀಕರಣ ಮಾಡುವ ಉದ್ದೇಶದಿಂದ ಯುವಕ ಈ ಕೃತ್ಯದಲ್ಲಿ ತೊಡಗಿದ್ದ ಎಂದು ಹೇಳಲಾಗಿದೆ.

Posted in: Crime News