ಬೈಂದೂರು:ಮೀನುಗಾರರ ಸಂಘದಲ್ಲಿ ಅವ್ಯವಹಾರ

Posted on April 16, 2011

0


ಮಂಗಳೂರು: ಬೈಂದೂರು ಮೀನುಗಾರರ ಸಂಘದಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಪೊಲೀಸರಿಗೆ ದೂರು ದಾಖಲಿಸಲಾಗಿದೆ.

ಮೂರು ವರ್ಷಗಳ ಹಿಂದೆ ಸುಮಾರು ೧,೦೫,೦೦೦ರೂ. ಅವ್ಯವಹಾರ ನಡೆದಿದ್ದು, ಇತ್ತೀಚೆಗೆ ಲೆಕ್ಕಪರಿಶೋಧನೆಯ ಸಂದರ್ಭ ಬೆಳಕಿಗೆ ಬಂದಿದೆ. ಈ ಅವ್ಯವಹಾರವನನ್ನು ಸಂಘದ ಹಿಂದಿನ ಕಾರ್ಯದರ್ಶಿ ಶ್ಯಾಮಲಾ ಮಸ್ಕಿ(೨೩)ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇವರು ತಮ್ಮ ಅಧಿಕಾರ ದುರುಪಯೋಗ ಪಡಿಸಿ ಹಣವನ್ನು ಸ್ವಂತಕ್ಕೆ ಬಳಿಸಿದ್ದಲ್ಲದೆ ಹಲವು ದಾಖಲೆಪತ್ರಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಸುಟ್ಟು ಹಾಕಿದ್ದಾರೆ ಎಂದು ಸಂಘದ ಮಾಜಿ ಅಧ್ಯಕ್ಷ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Posted in: Crime News