ಫ್ರಾನ್ಸ್‌ನ ವಸ್ತುಗಳನ್ನು ಬಹಿಷ್ಕರಿಸಿ: ಮುಸ್ಲ ಿಂ ಫೋರಂ

Posted on April 16, 2011

0


ಆಲಿಘಡ: ಫ್ರಾನ್ಸ್ ಸರಕಾರ ಬರ್ಖಾ ಧರಿಸುವುದನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ, ಭಾರತೀಯರು ಫ್ರಾನ್ಸ್ ಸರಕು ವಸ್ತುಗಳನ್ನು ಬಹಿಷ್ಕರಿಸಬೇಕು ಎಂದು ಸರಕಾರೇತರ ಸೇವಾ ಸಂಸ್ಥೆ ಯೊಂದು ಒತ್ತಾಯಿಸಿದೆ.

ಮುಸ್ಲಿಂ ಸ್ಟಡೀಸ್ ಆಂಡ್ ಆನ ಲಾಯಿಸಿಸ್ ಫೋರಂ, ಪ್ರಧಾನ ಮಂತ್ರಿ ಯವರಿಗೆ ಮನವಿಯೊಂದನ್ನು ಸಲ್ಲಿ ಸಿದ್ದು, ಫ್ರಾನ್ಸ್ ಸರಕಾರ ಬುರ್ಖಾ ಮೇಲಿನ ನಿಷೇಧ ಹೊರಡಿಸಿ ಮಾನವ ಹಕ್ಕುಗಳು ಹಾಗೂ ಮಹಿಳಾ ಹಕ್ಕುಗ ಳನ್ನು ಉಲ್ಲಂಘಿಸಿದಂತಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದೆ.

ಭಾರತದ ಸರಕಾರ ಫ್ರಾನ್ಸ್‌ನಿಂದ ಅಮದು ಮಾಡಿಕೊಳ್ಳುವುದನ್ನು ನಿಲ್ಲಿಸ ಬೇಕು ಹಾಗೂ ಭಾರತೀಯರು ಫ್ರಾನ್ಸ್ ವಸ್ತುಗಳನ್ನು ಬಹಿಷ್ಕರಿಸಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.

Posted in: National News