ಪುತ್ತೂರು: ಮನೆಗೆ ನುಗ್ಗಿ ಹಲ್ಲೆ

Posted on April 16, 2011

0


ಪುತ್ತೂರು : ತಂಡವೊಂದು ರಾತ್ರಿಯ ವೇಳೆ ಮನೆಗೆ ನುಗ್ಗಿ ಮಹಿಳೆಯೊಬ್ಬರೂ ಸೇರಿದಂತೆ ಇಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಗುರುವಾರ ರಾತ್ರಿ ಪುತ್ತೂರು ನಗರ ಸಮೀಪದ ಚಿಕ್ಕಮುಡ್ನೂರು ಗ್ರಾಮದ ತಾರಿಗುಡ್ಡೆ ಎಂಬಲ್ಲಿ ನಡೆದಿದೆ.

ಚಿಕ್ಕಮೂಡ್ನೂರು ಗ್ರಾಮದ ತಾರಿಗುಡ್ಡೆ ನಿವಾಸಿ ಖತೀಜಮ್ಮ(೫೦) ಮತ್ತು ಅವರ ಪುತ್ರ ಅಬ್ದುಲ್ ರಹಿಮಾನ್(೨೯) ಹಲ್ಲೆಗೊಳಗಾದವರು . ಸ್ಥಳೀಯ ನಿವಾಸಿ ಮಹಮ್ಮದಾಲಿ ಮತ್ತು ಅವರ ಕಡೆಯ ಇಬ್ಬರು ಅವರ ಮನೆಗೆ ನುಗ್ಗಿ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.

Posted in: Crime News