ಅಕ್ರಮ ಕರಿಕಲ್ಲಿನ ಕೋರೆಗೆ ದಾಳಿ

Posted on April 16, 2011

0


ಕಾರ್ಕಳ: ಇಲ್ಲಿಗೆ ಸಮೀಪದ ಮಿಯ್ಯಾರು ಮಂಗಲ್ಪಾದೆ ಎಂಬಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಅಕ್ರಮ ಕರಿಕಲ್ಲಿನ ಕೋರೆಗೆ ಕಾರ್ಕಳ ತಹಶೀ ಲ್ದಾರರಾದ ಜಗನ್ನಾಥ ರಾವ್ ನೇತೃತ್ವ ದಲ್ಲಿ ಕಂದಾಯ ಇಲಾಖಾ ಸಿಬ್ಬಂದಿ ದಾಳಿ ನಡೆಸಿದಾಗ ಆರೋಪಿಗಳು ಪರಾರಿಯಾಗಿದ್ದರೆ, ಕೆಲ ಪರಿಕರಗಳನ್ನು ಮಾತ್ರವೇ ವಶಪಡಿಸಿಕೊಳ್ಳಲು ಸಾಧ್ಯ ವಾಗಿದೆ. ನಿನ್ನೆ ಮದ್ಯಾಹ್ನದ ವೇಳೆಗೆ ಈ ಕಾರ್ಯಚರಣೆ ನಡೆದಿದೆ ಎಂದು ತಿಳಿದುಬಂದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಇಲಾಖಾ ಸಿಬ್ಬಂದಿಗಳು ಸ್ಥಳದಲ್ಲಿ ಇಲ್ಲದೇ ಇದ್ದುದರಿಂದ ಆರೋಪಿಗಳೆಲ್ಲ ಪರಾರಿಯಾಗಲು ಸಾಧ್ಯವಾಗಿತ್ತೆಂದು ತಿಳಿದುಬಂದಿದೆ. ಘಟನಾ ಸ್ಥಳದಿಂದ ಜನರೇಟರ್, ಮೂರು ಯಂತ್ರ ಸೇರಿದಂತೆ ಇತರ ಪರಿಕರಗಳನ್ನು ವಶಪಡಿಸಲಾಗಿದೆ.

ಐತಿಹಾಸಿಕ ಹಿನ್ನಲ್ಲೆಯುಳ್ಳ ಗೋಮಟೇಶ್ವರ ಬೆಟ್ಟದ ಸರಹದ್ದಿನ ೩೦೦ ಮೀಟರ್ ವ್ಯಾಪ್ತಿ ಪ್ರದೇಶದಲ್ಲಿ ಯಾವುದೇ ಗಣಿಗಾರಿಕೆಗೆ ಅವಕಾಶವಿರುವುದಿಲ್ಲ. ಈ ಕಾನೂನು ಸುವ್ಯವಸ್ಥೆಯನ್ನು ಉಲ್ಲಂಘಿಸಿ ಅಕ್ರಮ ಗಣಿಗಾರಿಕೆ ನಡೆಯುತ್ತಿತ್ತೆಂಬ ದೂರಿನನ್ವಯ ಕಾರ್ಯಚರಣೆ ನಡೆದಿದೆ ಎಂದು ತಿಳಿದುಬಂದಿದೆ.

Posted in: Crime News