‘ನೂತನವಾದಿಗಳಿಂದ ಇಸ್ಲಾಂ ಇತಿಹಾಸ ತಿರುಚುವ ಪ್ರ ಯತ್ನ’

Posted on April 16, 2011

0


ಸುಳ್ಯ: ಪವಿತ್ರ ಕುರಾನ್ ಮತ್ತು ಹದೀಸ್ (ಪ್ರವಾದಿ ಚರ್ಯೆ)ಗಳನ್ನು ಕಾಲಾನಂತರದ ಇಮಾಮ್‌ಗಳ ವ್ಯಾಖ್ಯಾನದ ಹಿನ್ನೆಲೆಯಲ್ಲಿ ಅರ್ಥೈಸದೇ ನೂತನವಾದಿ ಪಂಡಿತರ ವಾದವನ್ನು ಪುರಸ್ಕರಿಸಿ ಇಸ್ಲಾಂನ ಇತಿಹಾಸವನ್ನು ತಿರುಚುವ ಪ್ರಯತ್ನ ನಡೆಯುತ್ತಿದ್ದು ಇದು ಅಪಾಯಕಾರಿ ಬೆಳವಣಿಗೆಯಾ ಗಿದೆ ಎಂದು ದಕ್ಷಿಣ ಭಾರತದ ಪ್ರಖ್ಯಾತ ವಿದ್ವಾಂಸರಾದ ಮೌಲವಿ ಅಲವಿ ಸಖಾಫಿ ಎಚ್ಚರಿಸಿದರು.

‘ಪ್ರಮಾಣಗಳನ್ನು ಅರಿಯಿರಿ, ನೂತನವಾದ ಅಳಿಸಿರಿ’ ಎಂಬ ಘೋಷ ವಾಕ್ಯದೊಂದಿಗೆ ಸುಳ್ಯದಲ್ಲಿ ನಡೆದ ಬೃಹತ್ ಸುನ್ನಿ ಸಮಾವೇಶದಲ್ಲಿ ಅಲವಿ ಸಖಾಫಿ ಮುಖ್ಯ ಪ್ರಭಾಷಣ ಗೈದರು. ಇಸ್ಲಾಂನ ಸಂದೇಶಗಳು ಇಂದಿಗೂ ಪ್ರಸ್ತುತವೆನಿಸಿದ್ದು ಅದರ ವಿರುದ್ಧ ಮಾಡುವ ಎಲ್ಲಾ ಅಪಪ್ರಚಾರ ಗಳಿಗೂ ಸೋಲುಂಟಾಗಲಿದ್ದು ಮುಂದಿನ ದಿನಗಳಲ್ಲಿ ಅವರ ನೈಜ ಬಣ್ಣ ಬಯಲಾಗಲಿದೆ ಎಂದು ಸಖಾಫಿ ಹೇಳಿದರು.

ಸಮ್ಮೇಳನದ ಅಧ್ಯಕ್ಷತೆಯನ್ನು ಗಾಂಧಿನಗರದ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಹಾಜಿ ಐ. ಇಸ್ಮಾಯಿಲ್ ವಹಿಸಿದ್ದರು. ಸಮಾವೇಶದ ಉದ್ಘಾಟನೆ ಯನ್ನು ಗಾಂಧಿನಗರದ ಮುದರ್ರಿಸರಾದ ಅಲ್‌ಹಾಜ್ ಕಾನಕ್ಕೋಡ್ ಅಬ್ದುಲ್ ಖಾದರ್ ಮದನಿ ನೆರವೇರಿಸಿದರು. ಮೊಗರ್ಪಣೆ ಖತೀಬರಾದ ಸಲಾಹು ದ್ದೀನ್ ಸಖಾಫಿ, ಗಾಂಧಿನಗರ ಜುಮ್ಮಾ ಮಸೀದಿಯ ಖತೀಬರಾದ ಯೂನುಸ್ ಸಖಾಫಿ ಆಶಯ ಭಾಷಣಗೈದರು. ಅನ್ಸಾರಿಯಾ ಅನಾಥಾಲಯ ಅಧ್ಯಕ್ಷ ರಾದ ಹಾಜಿ ಕೆ. ಎ. ಅಬ್ಬಾಸ್ ಕಟ್ಟೆಕ್ಕಾರ‍್ಸ್, ನ. ಪಂ. ಸದಸ್ಯರಾದ ಕೆ. ಎಂ. ಮುಸ್ತಫಾ, ಅತ್ತಿಕರಮಜಲು ಜುಮಾ ಮಸೀದಿಯ ಅಧ್ಯಕ್ಷರಾದ ಹಾಜಿ ಪಿ. ಇಸಾಕ್ ಸಾಹೇಬ್, ಮೊಗ ರ್ಪಣೆ ಮಾಜಿ ಅಧ್ಯಕ್ಷರಾದ ಸಮದ್ ಹಾಜಿ, ಮಹಮ್ಮದ್ ಕುಂಞಿ ಗೂನಡ್ಕ ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಅಧ್ಯಕ್ಷರಾದ ರಶೀದ್ ಕಮ್ಮಾಡಿ ಸ್ವಾಗತಿಸಿ, ಸುಲೈಮಾನ್ ಸಖಾಫಿ ವಂದಿಸಿದರು. ಸತ್ತಾರ್ ಸಂಗಂ, ಅಬ್ದುಲ್ ಕಲಾಂ ಕಾರ್ಯಕ್ರಮ ನಿರೂಪಿಸಿದರು.

Advertisements