‘ಒಳ್ಳೆಯದನ್ನು ತಿಳಿಸಿ, ಇಲ್ಲವೇ ಸುಮ್ಮನಿರಿ’

Posted on April 16, 2011

0


ಮಂಗಳೂರು: ಯಡಿಯೂರಪ್ಪ ಅವರ ನೇತೃತ್ವದ ತಾಜ್ಯ ಸರಕಾರ ರೈತರಿಗೆ ಬೇಕಾಗಿ ಸಾಕಷ್ಟು ಯೋಜನೆ ಗಳನ್ನು ಜಾರಿಗೊಳಿಸಿದೆ. ಆದರೆ ಕಾಂಗ್ರೆಸ್ ಮತ್ತು ಕೆಲವು ಸಂಘಟನೆ ಗಳು ಸರಕಾರದ ವಿರುದ್ಧ ಅಪಪ್ರಚಾರ ಮಾಡುವ ಮೂಲಕ ಜನರಲ್ಲಿ ತಪ್ಪು ತಿಳುವಳಿಕೆ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ನಿಲ್ಲಿಸಿ ಒಳ್ಳೆಯದನ್ನು ಜನರಿಗೆ ತಿಳಿಸಿ ಅಥವಾ ಸುಮ್ಮನೆ ಕುಳಿತುಕೊಳ್ಳಿ. ಇದು ಬಿ.ಜೆ.ಪಿ. ರಾಜ್ಯಾಧ್ಯಕ್ಷ ಪದ್ಮನಾಭ ಕೊಟ್ಟಾರಿ ಅವರು ನೀಡಿರುವ ಸಲಹೆ.

ನಿನ್ನೆ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಯಡಿಯೂ ರಪ್ಪ ಅವರು ರೈತರ ನಾಯಕನಾಗಿದ್ದು ಪ್ರತ್ಯೇಕ ಕೃಷಿ ಬಜೆಟ್ ಮಂಡಿಸುವ ಮೂಲಕ ರೈತ ಕಲ್ಯಾಣಕ್ಕಾಗಿ ಯಾವು ದೇ ಸರಕಾರ ಮಾಡದ ಕೆಲಸವನ್ನು ಮಾಡಿದ್ದಾರೆ. ನ್ಯಾಯಾಲಯದ ಆದೇಶ ದಂತೆ ಕಾನ-ಬಾನೆ-ಕುಮ್ಕಿ ಜಾಗದ ಸರ್ವೇ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು ಆ ಕೆಲಸ ನಡೆಯುತ್ತಿ ದೆಯೇ ಹೊರತು ರೈತರಿಂದ ಕುಮ್ಕಿ ಜಮೀನ ನ್ನು ಕಸಿಯುವ ಯಾವುದೇ ಹೊಸ ಆದೇಶವನ್ನು ಯಡ್ಡಿ ನೀಡಿಲ್ಲ. ಆದರೆ ವಿರೋಧಿಗಳು ಸುಳ್ಳು ಪ್ರಚಾರ ಮಾಡುತ್ತಿ ದ್ದು ರೈತರಿಗೂ ಇದರ ಮಾಹಿತಿ ಇಲ್ಲದೆ ಗೊಂದಲಕ್ಕೆ ಸಿಲುಕಿ ದ್ದಾರೆ ಎಂದು ಕೊಟ್ಟಾರಿ ತಿಳಿಸಿದ್ದಾರೆ.

ಇದೇ ವೇಳೆ ಯುಪಿಸಿಎಲ್ ಹಾರುಬೂದಿ ಸಮಸ್ಯೆ, ವಿ.ಎಸ್. ಆಚಾ ರ್ಯ ಮತ್ತು ಪೇಜಾವರ ಶ್ರೀಗಳ ನಿರ ಶನ ತಡೆಯ ಬಗ್ಗೆ ಪತ್ರಕರ್ತರು ಪ್ರಶ್ನಿ ಸಿದ್ದು ಅದಕ್ಕೆ ಉತ್ತರಿಸಿದ ಸಂಸದ ನಳಿನ್ ಕುಮಾರ್ ಹಾರು ಬೂದಿ ಸಮಸ್ಯೆಯನ್ನು ಪರಿಹರಿಸಲು ಶ್ರೀಗಳ ಇಚ್ಛೆಯಂತೆ ಕ್ರಮ ಕೈಗೊಂಡಿರುವುದಾಗಿ ಅವರಿಗೆ ತಿಳಿಸಿ ಸತ್ಯಾಗ್ರಹ ಮಾಡದಂತೆ ವಿನಂತಿ ಸಲಾ ಗಿತ್ತು ಎಂದರು. ಸಚಿವ ಆಚಾರ್ಯ ಅವರು ಹಾರು ಬೂದಿ ಯಿಂದ ಸಮಸ್ಯೆ ಇಲ್ಲ. ಕಂಪೆನಿಯನ್ನು ಮುಚ್ಚಿಸಲು ಪೇಜಾವರ ಯಾರು ಎಂದು ಪ್ರಶ್ನಿಸಿದ್ದಾ ರೆ. ಈ ಮೂಲಕ ಜನಪ್ರತಿನಿಧಿ ಗಳಲ್ಲೇ ಗೊಂದಲ ಇರುವುದರ ಬಗ್ಗೆ ಗಮನ ಸೆಳೆಯಲಾಯಿತು. ಇದಕ್ಕೆ ಉತ್ತರಿಸಿದ ನಳಿನ್ ನಮ್ಮಲ್ಲಿ ಗೊಂದಲ ಇಲ್ಲ, ಆಚಾ ರ್ಯ ಅವರ ಹೇಳಿಕೆ ತನ್ನ ಗಮನಕ್ಕೆ ಬಂದಿಲ್ಲ ಎಂದರು. ಇದೇ ವೇಳೆ ನಳಿನ್ ಅದಕ್ಕೆ ಇದು ವರೆಗೂ ಅವ ಕಾಶ ನೀಡಿಲ್ಲ. ಅಲ್ಲದೆ ಡಿನೋಟಿಫೈ ಮಾಡುವ ಜವಾಬ್ದಾರಿ ನಮ್ಮದಾಗಿದ್ದು ದಿನಗಳಲ್ಲಿ ಹೆಚ್ಚುಕಮ್ಮಿ ಆಗಬಹುದು ಎಂದರು. ಯೋಗೀಶ್ ಭಟ್, ಶೈಲಜಾ ಭಟ್, ರಮೇಶ್.ಎಸ್. ಉಪಸ್ಥಿತರಿದ್ದರು.

Advertisements