ಸ್ವಯಂಘೋಷಿತ ಆಸ್ತಿ ತೆರಿಗೆ ಪರಿಷ್ಕರಣೆ ಸಾಧ್ಯ ವೆ?

Posted on April 16, 2011

0


ಮಂಗಳೂರು: ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಈಗ ಶೇ.೧೫ರಷ್ಟು ಹೆಚ್ಚಿಸಿರುವ ಸ್ವಯಂ ಘೋಷಿತ ಆಸ್ತಿ ತೆರಿಗೆಯ ನಿರ್ಣಯ ವನ್ನು ಪರಿಷ್ಕರಿಸಲು ಪ್ರಯತ್ನಿಸಲಾ ಗುವುದು ಎಂಬ ಭರವಸೆಯನ್ನು ಮನಪಾ ಮೇಯರ್ ಪ್ರವೀಣ್ ನೀಡಿದ್ದಾರೆ.

ಕಳೆದ ಗುರುವಾರ ನಗರದ ಡಾನ್ ಬಾಸ್ಕೋ ಹಾಲ್‌ನಲ್ಲಿ ಮಂಗಳೂರು ಸಿಟಿಜನ್ ಅಸೋಸಿಯೇಶನ್‌ನವರು ಆಯೋಜಿಸಿದ್ದ ಸಂವಾದ ಕಾರ್ಯಕ್ರಮ ದಲ್ಲಿ ಮೇಯರ್ ಈ ಭರವಸೆ ನೀಡಿ ದ್ದಾರೆ. ಆದರೆ ಈ ಭರವಸೆ ಈಡೇರಿ ಸಲು ಸಾಧ್ಯವೆ ಎಂಬುದು ಈಗ ಎದುರಿ ಗಿರುವ ಪ್ರಶ್ನೆ. ಮೇಯರ್‌ರ ಪ್ರಕಾರ ವಿಷಯದ ಪರಿಷ್ಕರಣೆಯ ಕುರಿತಂತೆ ಸಚಿವ ಪಾಲೆಮಾರ್ ಹಾಗೂ ವಿಧಾನ ಸಭೆಯ ಉಪಾಧ್ಯಕ್ಷ ಯೋಗೀಶ್ ಭಟ್ ರೊಂದಿಗೆ ಚರ್ಚಿಸಿ ಸರಕಾರದ ಮೇಲೆ ಒತ್ತಡ ಹೇರಲು ಪ್ರಯತ್ನಿಸಲಾ ಗುವುದು ಎಂದಿರುವ ಮೇಯರ್, ತೆರಿಗೆ ಹೆಚ್ಚಳ ಮಾಡುವುದು ಸರಕಾರದ ಆದೇಶವಾಗಿರುವುದರಿಂದ ನಾವೇನೂ ಮಾಡಲಾಗದು ಎಂಬ ಅಸಹಾಯಕತೆ ಯನ್ನೂ ಇದೇ ಸಂದರ್ಭದಲ್ಲಿ ವ್ಯಕ್ತ ಪಡಿಸಿದ್ದಾರೆ. ಎ.೧ರಿಂದ ತೆರಿಗೆ ಹೆಚ್ಚಿಸುವುದನ್ನು ಕೇವಲ ಒಂದು ದಿನದ ಮೊದಲು ಹೇಳಿರುವ ಮೇಯರ್ ಪ್ರವೀಣರಿಂದ ಪರಿಷ್ಕರಣೆ ಸಾಧ್ಯವೇ? ಪರಿಷ್ಕರಣೆ ಎಂಬ ತಾತ್ಕಾಲಿಕ ಭರವಸೆ ಯ ಮೂಲಕ ಪಲಾಯನ ಮಾಡುತ್ತಿ ದ್ದಾ ರೆಯೇ ಎಂಬುದನ್ನು ಅವರೇ ಸಾಬೀತು ಪಡಿಸಬೇಕಿದೆ.

ಮಾಜಿ ಮೇಯರ್, ಮನಪಾ ವಿಪಕ್ಷ ಸದಸ್ಯ ಶಶಿಧರ್ ಹೆಗ್ಡೆಯವರ ಪ್ರಕಾರ ಆಡಳಿತಗಾರರು ಮನಸ್ಸು ಮಾಡಿದರೆ ತೆರಿಗೆ ಹೆಚ್ಚಳ ತಡೆಯಲು ಸಾಧ್ಯವಿದೆ. ಸರಕಾರದ ಅನುಮತಿ ಯೊಂದಿಗೆ ತೆರಿಗೆ ಹೆಚ್ಚಳವನ್ನು ಮನಪಾ ವ್ಯಾಪ್ತಿಯಲ್ಲಿ ಜಾರಿಗೊಳಿಸದಿ ರುವ ನಿರ್ಣಯವನ್ನು ಪಾಲಿಕೆ ಪರಿಷತ್ ಸಭೆಯಲ್ಲಿ ಕೈಗೊಳ್ಳಬಹುದು. ರಾಜ್ಯ ದಲ್ಲಿ ಇವರದೆ ಸರಕಾರದ ಆಡಳಿತ ಇರುವುದರಿಂದ ಇದು ಕಷ್ಟವೇನಲ್ಲ ಆದರೆ ಮಾಡುವ ಇಚ್ಚಾಶಕ್ತಿ ಬೇಕು.

ಮನಪಾದಲ್ಲಿ ಕಾಂಗ್ರೆಸ್ ಆಡಳಿತ ವಿದ್ದ ಅವಧಿಯಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಜಾರಿಗೆ ತರಲಾಗಿ ರಲಿಲ್ಲ. ಇದು ಸಾಧ್ಯವಾಗುವುದಾದರೆ ಹೆಚ್ಚಳವನ್ನು ತಡೆಯಲು ಸಾಧ್ಯವಿಲ್ಲವೇ ಎಂಬುದು ಶಶಿಧರರ ಪ್ರಶ್ನೆ.

ಮುಂದಿನ ತಿಂಗಳಿನಿಂದ ನಗರದ ಜಮೀನಿನ ಮೌಲ್ಯ ಹೆಚ್ಚಿಸುವ ಆದೇಶ ಬರುವ ಸಾಧ್ಯತೆ ಇದೆ. ಆಗ ತೆರಿಗೆ ಸಂಗ್ರಹದ ಪ್ರಮಾಣ ತನ್ನಿಂದ ತಾನೆ ಹೆಚ್ಚಾಗುತ್ತದೆ. ಇದರೊಂದಿಗೆ ಶೆ.೧೫ರ ಹೆಚ್ಚಳದ ಹೊರೆ ಜನರ ಮೇಲೆ ಹೇರುವುದು ಬೇಡ. ಈ ದಿಸೆಯಲ್ಲಿ ಪಾಲಿಕೆಯ ಆಡಳಿತಗಾರರು ಪ್ರಾಮಾ ಣಿಕ ಪ್ರಯತ್ನ ಮಾಡಲಿ ಎಂಬ ಸಲಹೆಯನ್ನು ಶಶಿಧರ್ ಹೆಗ್ಡೆ ನೀಡು ತ್ತಾರೆ.

ತೆರಿಗೆ ಹೆಚ್ಚಳ ಮಾಡಿದ ತಿಂಗಳ ಬಳಿಕ ಪರಿಷ್ಕರಣೆಯ ಮಾತುಗಳು ಕೇಳಿಬರುತ್ತಿರುವುದು ನಾಗರಿಕರಲ್ಲಿ ಗೊಂದಲ ಸೃಷ್ಟಿಸುವ ಸಾಧ್ಯತೆಗಳಿವೆ. ಹೆಚ್ಚಳವಾಗಿರುವ ತೆರಿಗೆಯನ್ನು ನಾಗರಿ ಕರು ಈಗಾಗಲೇ ಪಾವತಿಸುತ್ತಿದ್ದಾರೆ. ಎ.೩೦ರ ಒಳಗೆ ಪಾವತಿಸಿದವರಿಗೆ ಶೇ.೫ ರಷ್ಟು ರಿಯಾಯಿತಿಯನ್ನೂ ಘೋಷಿಸ ಲಾಗಿದೆ. ಈ ರಿಯಾ ಯಿತಿಯ ಲಾಭ ಪಡೆಯಲು ಹೋದರೆ ಪಾಲಿಕೆಯ ಲ್ಲೀಗ ಅಗತ್ಯ ಅರ್ಜಿಗಳು ಖಾಲಿಯಾಗಿವೆ ಎಂಬ ಉತ್ತರ ದೊರೆಯುತ್ತಿದೆ.

Advertisements