ಸರಕಾರಿ ಬಸ್ ಅವಾಂತರ: ಚಾಲಕನೂ ಸೇರಿದಂತೆ ೧೫ ಮಂದಿ ಆಸ್ಪತ್ರೆಗೆ

Posted on April 16, 2011

0


ಮಂಗಳೂರು: ನಗರದ ಪ್ರಮುಖ ಸ್ಥಳದಲ್ಲಿಯೇ ಚಾಲಕನ ನಿಯಂತ್ರಣ ತಪ್ಪಿದ ಸರಕಾರಿ ಬಸ್ಸೊಂದು ಒಂದೆರಡು ವಾಹನಗಳಿಗೆ ಡಿಕ್ಕಿ ಹೊಡೆದ ಬಳಿಕ ಬಸ್ಸೊಂದಕ್ಕೆ ಡಿಕ್ಕಿ ಹೊಡೆದು ನಿಂತಿದ್ದು ಇದರಿಂದಾಗಿ ಕೆಲವು ಮಂದಿಗೆ ಗಾಯಗಳಾಗಿದ್ದು ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

ನಿನ್ನೆ ಮಧ್ಯಾಹ್ನ ಮಂಗಳೂರಿನಿಂದ ವಿಟ್ಲಕ್ಕೆ ಹೋಗುತ್ತಿದ್ದ ಸರಕಾರಿ ಬಸ್ಸೊಂದು ಬಾವುಟಗುಡ್ಡ ತಲುಪುತ್ತಲೇ ಚಾಲಕನ ನಿಯಂತ್ರಣ ಕಳೆದುಕೊಂಡಿತ್ತು. ಇದರ ಪರಿಣಾಮವಾಗಿ ಜ್ಯೋತಿ ಸಿಗ್ನಲ್‌ವರೆಗೆ ತಲುಪುವ ಹೊತ್ತಿಗೆ ಒಂದು ರಿಕ್ಷಾ, ಎರಡು ಕಾರುಗಳಿಗೆ ಡಿಕ್ಕಿ ಹೊಡೆದಿತ್ತು. ಇದೇ ವೇಳೆ ಜ್ಯೋತಿಯಲ್ಲಿ ಸಿಗ್ನಲ್ ಹಾಕಿದ್ದು ನಿಂತಿದ್ದ ವಾಹನಗಳನ್ನು ತಪ್ಪಿಸುತ್ತಾ ಬಂದ ಚಾಲಕ ಕೊನೆಗೆ ಎದುರುಗಡೆ ಇದ್ದ ಉಳ್ಳಾಲದ ಅಶ್ವಿನಿ ಬಸ್ಸಿಗೆ ಡಿಕ್ಕಿ ಹೊಡೆದಿದ್ದ. ಇಷ್ಟೆಲ್ಲಾ ರಾದ್ದಾಂತದಿಂದಾಗಿ ಸರಕಾರಿ ಬಸ್ ಚಾಲಕನೂ ಸೇರಿದಂತೆ ೧೫ರಷ್ಟು ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಒಂದು ವೇಳೆ ಸಿಗ್ನಲ್ ಹಾಕಿರದಿದ್ದರೆ ಭಾರೀ ಅನಾ ಹುತ ಮತ್ತು ಪ್ರಾಣಹಾನಿ ಸಂಭವಿಸಲಿತ್ತು. ಬ್ರೇಕ್ ವೈಫಲ್ಯವೇ ಘಟನೆಗೆ ಕಾರಣ ಎಂದು ಹೇಳಲಾಗಿದೆಯಾದರೂ ಟ್ರಾಫಿಕ್ ಇನ್ಸ್‌ಪೆಕ್ಟರ್‌ರ ವರದಿಗೆ ಕಾಯಲಾಗುತ್ತಿದೆ.

Advertisements
Posted in: Crime News