ಸರಕಾರಿ ನೌಕರರಿಂದ ಭೂ ಮಾರಾಟ ದಂಧೆ

Posted on April 16, 2011

0


ಪುತ್ತೂರು: ಬೆಳ್ತಂಗಡಿ ಹೋಬಳಿ ಕಂದಾಯ ನಿರೀಕ್ಷಕ ಪದ್ಮಕುಮಾರ್, ಪುತ್ತೂರು ತಾಲೂಕು ಕಚೇರಿ ವಾಹನ ಚಾಲಕ ದೇವದಾಸ್ ಎಂಬಾತ ತನ್ನ ಅಧಿಕಾರ ದುರುಪ ಯೋಗ ಪಡಿಸಿ ಸಾರ್ವಜನಿಕ ಜಮೀನನ್ನು ತನ್ನ ಹೆಸ ರಿಗೆ ಮಾಡಿ ಭೂ ಮಾರಾಟ ದಂಧೆ ನಡೆಸಿರುವ ಭೂ ಹಗರಣವನ್ನು ಸಾಹಿತಿ, ಪತ್ರಕರ್ತ ವಿಜಯಕುಮಾರ ಭಂಡಾರಿ ಪತ್ರಿಕಾ ಗೋಷ್ಠಿಯಲ್ಲಿ ಬಯಲಿಗೆಳೆದಿದ್ದಾರೆ.

ಪದ್ಮಕುಮಾರ್ ಪುತ್ತೂರು ಕಸಬಾ ಗ್ರಾಮಲೆಕ್ಕಿಗನಾಗಿದ್ದ (೧೯೯೩ ರಿಂದ ೧೯೯೭) ವೇಳೆ ಸದ್ರಿ ಗ್ರಾಮದ ನಂದಿಲ ಎಂಬಲ್ಲಿ ಸರಕಾರಿ ಜಮೀನು ಸ. ನಂ. ೫/೯ ರಲ್ಲಿ ೦.೦೫ ಎಕ್ರೆ ಜಾಗವನ್ನು ಪತ್ನಿ ಶ್ರೀಮತಿ ರತ್ನಾವತಿ ಹೆಸರಲ್ಲಿ ಮಂಜೂರು ಮಾಡಲಾಗಿದೆ. ಅಲ್ಲದೆ ಸದ್ರಿ ನಿವೇಶನದ ಬಳಿ ಬೇನಾಮಿ ಹೆಸರಲ್ಲಿ ಮಾಡಿದ ಮನೆನಿವೇಶನವನ್ನು ನಾರಾಯಣ ಹೆಗ್ಡೆ ಎಂಬವರಿಗೆ ಮಾರಾಟ ಮಾಡಿದ್ದಾರೆ. ಪದ್ಮಕುಮಾರ್ ತಾನು ಕರ್ತವ್ಯ ನಿರ್ವಹಿಸಿದ ಎಲ್ಲಾ ಗ್ರಾಮದಲ್ಲೂ ಬೇನಾಮಿ ಹೆಸರಲ್ಲಿ ಮನೆನಿವೇಶನ ಮಂಜೂರು ಮಾಡಿ ಮಾರಾಟ ಮಾಡಿದ್ದಾರೆಂಬ ಕೂಗು ಸಾರ್ವಜನಿಕವಾಗಿ ಕೇಳಿಬರುತ್ತಿದೆ. ಇದೇ ರೀತಿ ಸರಕಾರಿ ಇಲಾಖೆಯ ಕೆಲವು ನೌಕರರು ಜಿಲ್ಲೆಯಾದ್ಯಂತ ಅನೇಕ ಸರಕಾರಿ ಜಮೀನುಗಳನ್ನು ನುಂಗಿ ಹಾಕಿದ ಪ್ರಕರಣಗಳು ನಡೆದಿದ್ದು ಸಂಬಂಧ ಪಟ್ಟ ಇಲಾಖಾ ಅಧಿಕಾರಿಗಳು ಇಂತವರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರ ಪರವಾಗಿ ಒತ್ತಾಯಿಸಿದ್ದಾರೆ.

Advertisements