ಸಮಸ್ಯೆಗಳನ್ನು ಬಗೆಹರಿಸಲು ಮಹಿಳೆಯರು ಕಾರ‍್ಯೋ ನ್ಮುಖರಾಗಿ: ಶಾಹಿದಾ ತಸ್ನೀಂ ಕರೆ

Posted on April 16, 2011

0


ಮಂಗಳೂರು: ಮುಸ್ಲಿಂ ಮಹಿಳೆ ಯರು ತನ್ನ ಕುಟುಂಬದ ಮೇಲಿನ ಜವಾಬ್ದಾರಿಯನ್ನು ನಿರ್ವಹಿಸುವ ಕೆಲಸಕ್ಕೆ ಮಾತ್ರ ಸೀಮಿತವಾಗದೆ ಸಮಾಜದಲ್ಲಿರುವ ಹಲವು ಸಮಸ್ಯೆ ಗಳನ್ನು ಪರಿಹರಿಸಲು ಕಾರ್ಯೋ ನ್ಮುಖರಾಗಬೇಕು ಎಂದು ನ್ಯಾಷನಲ್ ವಿಮೆನ್ಸ್ ಫ್ರಂಟ್‌ನ ರಾಷ್ಟ್ರೀಯ ಪ್ರಧಾನ ಕಾರ‍್ಯದರ್ಶಿ ಶಾಹಿದಾ ತಸ್ನೀಂ ಕರೆ ನೀಡಿದರು.

ಅವರು ನ್ಯಾಷನಲ್ ವಿಮೆನ್ಸ್ ಪ್ರಂಟ್‌ನ ವತಿಯಿಂದ ರಾಷ್ಟ್ರದಾದ್ಯಂತ ಹಮ್ಮಿಕೊಂಡಿರುವ ಮಹಿಳಾ ಜಾಗೃತಿ ಅಭಿಯಾನದ ಅಂಗವಾಗಿ ಮಂಗಳೂ ರಿನ ಜಮೀಯತ್ತುಲ್ ಫಲಾಹ್ ಸಭಾಂ ಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಜಾಪ್ರಭುತ್ವ ದೇಶದಲ್ಲಿ ಇಂದು ಮುಸ್ಲಿಮರಿಗೆ ನ್ಯಾಯ ನಿರಾಕರಣೆ ಮಾಡಲಾಗುತ್ತಿದೆ, ಈ ಬಗ್ಗೆಯು ಕೂಡ ಮಹಿಳೆಯರು ಧ್ವನಿ ಎತ್ತಬೇಕು ಎಂದು ಹೇಳಿದ ಅವರು, ಮಹಿಳೆಯರು ತಮ್ಮ ಲ್ಲಿರುವ ಆಲಸ್ಯಗಳನ್ನು ದೂರಮಾಡಿ ಕೊಂಡು ಶ್ರಮ ಜೀವಿಗಳಾಗಿ ಕೆಲಸ ಮಾಡುವ ಪ್ರವೃತ್ತಿಯನ್ನು ಬೆಳೆಸಿ ಕೊಳ್ಳ ಬೇಕು ಎಂದು ಅವರು ನುಡಿ ದರು.

ವೇದಿಕೆಯಲ್ಲಿ ದಿಲ್‌ದಾರ್ ಉಡುಪಿ, ಶಮೀನಾ, ಶಾಹಿದಾ.ಎ, ಸಯೀದಾ ಉಪಸ್ಥಿತರಿದ್ದರು.

Advertisements