ಸಭೆ ವೇಳೆ ಮೊಬೈಲ್ ಸಂಭಾಷಣೆ: ಅಧಿಕಾರಿಯನ್ನು ತರಾ ಟೆಗೆ ತೆಗೆದುಕೊಂಡ ಸಂಸದರು

Posted on April 16, 2011

0


ಉಡುಪಿ: ಕೇಂದ್ರದ ಯೋಜನೆಗಳ ಕುರಿತ ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮೊಬೈಲ್‌ನಲ್ಲಿ ಮಾತಾಡುತ್ತಿದ್ದ ಅಧಿಕಾರಿಯನ್ನು ಸಂಸದ ಡಿ.ವಿ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಉಡುಪಿಯಲ್ಲಿ ನಿನ್ನೆ ಸಂಸದ ಸದಾನಂದ ಗೌಡ ನೇತೃತ್ವದಲ್ಲಿ ಸಭೆ ನಡೆದಿತ್ತು. ಈ ವೇಳೆ ಲೋಕೋ ಪಯೋಗಿ ಅಧಿಕಾರಿ ಮೊಬೈಲ್‌ನಲ್ಲಿ ಮಾತನಾಡು ತ್ತಿದ್ದುದನ್ನು ಕಂಡು ಸದಾ ಹಸನ್ಮುಖಿ ಗೌಡ ಕೆಂಡಾ ಮಂಡಲವಾಗಿ ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದು ಕೊಂಡರು.

ಕೇಂದ್ರದ ಯೋಜನೆಗಳ ಸಭೆಯಲ್ಲಿ ಮಳೆಗಾಲ ಪ್ರಾರಂಭವಾಗುವ ಮುನ್ನ ದುರವಸ್ಥೆಯಲ್ಲಿರುವ ರಸ್ತೆಗಳನ್ನು ಸರಿಪಡಿಸುವಂತೆ ಹಾಗೂ ಈಗಾಗಲೇ ಕೆಲವೆಡೆ ಸ್ಥಗಿತ ಗೊಂಡಿರುವ ಕಾಮಗಾರಿಯನ್ನು ನಡೆಸುವಂತೆ ತಾ.ಪಂ ಅಧ್ಯಕ್ಷ ದೇವದಾಸ್ ಹೆಬ್ಬಾರ್ ಸಂಸದರಲ್ಲಿ ಮನವಿ ಮಾಡುತ್ತಿರುವಾಗ ರಸ್ತೆಗೆ ಸಂಬಂಧಿಸಿದ ಲೋಕೋ ಪಯೋಗಿ ಇಲಾಖೆ ಕಾರ‍್ಯನಿರ್ವಾಹಕ ಅಭಿಯಂತರ ಸುರೇಶ್ ಶೆಟ್ಟಿ ಎಂಬವರು ಮೊಬೈಲ್ ಮೂಲಕ ಮಾತ ನಾಡಿ ಡಿ.ವಿಯಿಂದ ಛೀಮಾರಿಗೊಳಗಾಗಿದ್ದಾರೆ. ಮುಂದೆ ತನ್ನ ಸಭೆಯಲ್ಲಿ ಹಾಜರಿರುವಾಗ ಎಲ್ಲಾ ಅಧಿಕಾರಿಗಳು ಮೊಬೈಲ್ ಸ್ವಿಚ್ಡ್ ಆಫ್ ಮಾಡಿ ಬರುವಂತೆ ಡಿ.ವಿ. ಆದೇಶಿಸಿದ್ದಾರೆ. ಇದೇ ವೇಳೆ ಸುರೇಶ್ ಶೆಟ್ಟಿ ಕಳೆದ ಹತ್ತು ವರ್ಷಗಳಿಂದ ವರ್ಗಾವಣೆಯಿಲ್ಲದೆ ಉಡುಪಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆಂಬ ಮಾತು ಕೇಳಿಬಂತು.

Advertisements
Posted in: Udupi District