ವಿಶ್ವ ಬಾಕ್ಸಿಂಗ್: ಭಾರತದ ಎಂಟು ಬಾಕ್ಸರ್‌ಗಳು

Posted on April 16, 2011

0


ನವದೆಹಲಿ: ಈ ತಿಂಗಳ ೨೦ರಿಂದ ೨೪ರ ವರೆಗೆ ಸರ್ಬಿಯಾದಲ್ಲಿ ನಡೆಯಲಿರುವ ‘ಬೆಲ್‌ಗ್ರೇಡ್ ವಿನ್ನರ್ ೨೦೧೧ ಅಂತಾರಾಷ್ಟ್ರೀಯ ಬಾಕ್ಸಿಂಗ್ ಸ್ಪರ್ಧೆಗೆ ಭಾರತದ ಪರ ಎಂಟು ಸದಸ್ಯರು ಭಾಗವಹಿಸಲಿದ್ದಾರೆ.

ಏಶ್ಯನ್ ಗೇಮ್ಸ್‌ನ ಚಿನ್ನದ ಪದಕ ವಿಜೇತ ವಿಕಾಸ್ ಕೃಷ್ಣನ್ (೬೦ ಕೆ.ಜಿ ವಿಭಾಗ), ಕಾಮನ್‌ವೆಲ್ತ್ ಗೇಮ್ಸ್‌ನ ಸ್ವರ್ಣ ವಿಜೇತ ಪರಮ್‌ಜೀತ್ ಸಮೋಟಾ (೯೧ ಕೆ.ಜಿ) ಹಾಗೂ ಒಲಿಂಪಿಕ್ಸ್ ಹಾಗೂ ಏಶ್ಯನ್ ಗೇಮ್ಸ್‌ನ ಬೆಳ್ಳಿ ಪದಕ ವಿಜೇತ ದಿನೇಶ್ ಕುಮಾರ್ (೮೧ ಕೆ.ಜಿ) ನೇತೃತ್ವ ಭಾರತ ತಂಡವನ್ನು ಸರ್ಬಿಯಾದಲ್ಲಿ ಮುನ್ನಡೆಸಲಿದ್ದಾರೆ. ಇವರನ್ನು ಹೊರತುಪಡಿಸಿ ಶಿವ ಥಾಪ (೫೬ ಕೆ.ಜಿ), ಮನೋಜ್ ಕುಮಾರ್ (೬೪ ಕೆ.ಜಿ), ಮನ್‌ದೀಪ್ ಜಂಗ್ರಾ (೬೯ ಕೆ.ಜಿ), ಕುಲ್‌ದೀಪ್ ಸಿಂಗ್ (೭೫ ಕೆ.ಜಿ), ಮನ್‌ಪ್ರೀತ್ ಸಿಂಗ್ (೯೧ ಕೆ.ಜಿ) ತಂಡದಲ್ಲಿರುವ ಇತರೆ ಬಾಕ್ಸರ್‌ಗಳಾಗಿದ್ದಾರೆ.

Advertisements
Posted in: Sports News