ವಿಟ್ಲ: ವಿವಾದದಲ್ಲಿ ಸರ್ಕಾರಿ ನಿವೇಶನ

Posted on April 16, 2011

0


ವಿಟ್ಲ: ಸರ್ಕಾರ ಬಡವರಿಗಾಗಿ ಮನೆ ಕಟ್ಟಲು ನೀಡಿದ ಭೂಮಿಯಲ್ಲಿ ವಸತಿ ಕಟ್ಟುತ್ತಿದ್ದ ಸಂದರ್ಭ ಕೆಲ ರಾಜಕೀಯ ಧುರೀಣರು ಮಧ್ಯೆ ಪ್ರವೇಶಿಸಿ ವಿವಾದವಾದ ಘಟನೆ ವೀರಕಂಭ ಗ್ರಾಮದ ಮಜ್ಜೋಡಿ ಎಂಬಲ್ಲಿ ನಿನ್ನೆ ನಡೆದಿದೆ.

ಸರ್ವೆ ನಂಬ್ರ ೧೬೨/೧ರಲ್ಲಿ ಸರ್ಕಾರಿ ಜಾಗವನ್ನು ಮನೆ ಇಲ್ಲದ ವರಿಗೆ ಮನೆ ಕಟ್ಟಿಕೊಳ್ಳಲು ೫೦ ಸೆಂಟ್ಸ್ ಜಾಗವನ್ನು ನೀಡಿದ್ದರು. ೧೯೯೭ ರಲ್ಲಿ ೧೦ ಜನರಿಗೆ ಹಕ್ಕು ಪತ್ರ ಕೂಡಾ ಸಿಕ್ಕಿತ್ತು. ಆದರೆ ಫಲಾನುಭವಿಗಳು ಈ ಜಾಗದಲ್ಲಿ ಮನೆ ಕಟ್ಟದೆ ಸ್ವಲ್ಪ ಸಮಯ ಹಾಗೆಯೇ ಬಿಟ್ಟಿದ್ದು, ಇದೀಗ ಕೆಲ ವರು ಮನೆ ಕಟ್ಟಲು ತಯಾರಿ ನಡೆ ಸುತ್ತಿದ್ದರು. ಈ ನಡುವೆ ಮಧ್ಯೆ ಪ್ರವೇಶಿಸಿದ ಎರಡು ರಾಜಕೀಯ ಪಕ್ಷದ ನೇತಾರರು ಮನೆ ಕಟ್ಟಲು ಆಕ್ಷೇಪ ವ್ಯಕ್ತಪಡಿಸಿದ್ದರೆ ಇನ್ನೊಂದು ಗುಂಪು ಇಲ್ಲಿ ಮನೆಗಳನ್ನು ಕಟ್ಟಲೇ ಬೇಕು ಎಂದು ಪಟ್ಟು ಹಿಡಿದು ಉದ್ವಿಗ್ನ ಸ್ಥಿತಿ ನಿರ್ಮಾಣ ಮಾಡಿದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ವಿಟ್ಲ ಪೊಲೀ ಸರು, ಕಂದಾಯ ಇಲಾಖೆ ಅಧಿಕಾ ರಿಗಳು ಹಾಗೂ ಸರ್ವೆಯವರು ಪರಿಸ್ಥಿ ತಿಯನ್ನು ತಿಳಿಗೊಳಿಸಿ ಮನೆ ಕಟ್ಟಲು ಆಕ್ಷೇಪ ವ್ಯಕ್ತಪಡಿಸುತ್ತಿದ್ದವರನ್ನು ತರಾಟೆಗೆ ತೆಗೆದುಕೊಂಡರು ಎನ್ನ ಲಾಗಿದೆ. ಈ ಬಗ್ಗೆ ಕಂದಾಯ ಇಲಾ ಖೆಯ ತೀರ್ಮಾನ ಬರುವವರೆಗೆ ಈ ಜಾಗಕ್ಕೆ ಯಾರೂ ಪ್ರವೇಶ ಮಾಡ ಬಾರ ದೆಂದು ವಿಟ್ಲ ಎಸ್‌ಐ ರಕ್ಷಿತ್ ಇತ್ತಂಡಗಳಿಗೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಇದರ ವಿರುದ್ಧ ಯಾರಾದರೂ ಉದ್ವಿಗ್ನ ಸ್ಥಿತಿ ಉಂಟು ಮಾಡಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವು ದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

Advertisements