ವಂಚಕನ ವಿರುದ್ಧ ದೂರು ನೀಡುವವರಿಲ್ಲದೆ ಪ್ರಕರಣ ಠುಸ್!

Posted on April 16, 2011

0


ಪುತ್ತೂರು: ಪುತ್ತೂರಿನ ಬೊಳು ವಾರಿನ ಸೂರ್ಯ ಪ್ರಭಾ ಕಟ್ಟಡದಲ್ಲಿ ನಡೆಯುತ್ತಿದ್ದ ಎನ್‌ಯೋಯ್ ಚಿಟ್ ಫಂಡ್ ಪ್ರೈವೇಟ್ ಲಿಮಿಟೆಡ್ ಕಂಪೆ ನಿ ಪುತ್ತೂರಿನ ಗ್ರಾಹಕರಿಗೆ ಸುಮಾರು ೨೪ ಲಕ್ಷದಷ್ಟು ಹಣವನ್ನು ಹಿಂತಿರುಗಿ ಸದೆ ವಂಚಿಸಿದೆ ಎಂದು ಆರೋಪಿಸಿ ವಂಚನೆಗೊಳಗಾದ ಗ್ರಾಹಕರು ಗುರು ವಾರ ಅದರ ಎಂ.ಡಿ ಎಂದು ಹೇಳಿ ಕೊಳ್ಳುತ್ತಿದ್ದ ವಿನೋದ್ ಎಂಬಾತನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದರೂ, ಯಾರೂ ದೂರು ನೀಡಲು ಮುಂದಾ ಗದೆ ಹಣ ಹಿಂತಿರುಗಿಸುವ ಬಗ್ಗೆ ಬಾಂಡ್ ಪೇಪರ್‌ನಲ್ಲಿ ಬರೆಸಿಕೊಳ್ಳುವ ಒಲವು ವ್ಯಕ್ತ ಪಡಿಸಿರುವುದರಿಂದ ವಂಚನೆ ಪ್ರಕರಣ ಠುಸ್ ಆಗಿದೆ.

ಕೇರಳದ ವಯನಾಡಿನ ಶಶಿ ಎಂಬಾತ ಆರಂಭಿಸಿದ್ದ ಈ ಚಿಟ್‌ಫಂಡ್ ಸಂಸ್ಥೆ ಕಳೆದ ಮೂರು ವರ್ಷಗಳಿಂದ ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿತ್ತು . ತಿಂಗಳಿಗೆ ೨೫೦೦ ರುಪಾಯಿಯಂತೆ ಇಲ್ಲಿನ ಹಲವು ಮಂದಿ ಪಾವತಿಸು ತ್ತಿದ್ದರು. ಪ್ರತೀ ತಿಂಗಳು ಡ್ರಾ ನಡೆಸಿ ವಿಜೇತರಿಗೆ ಹಣ ನೀಡಲಾಗುತ್ತಿತ್ತು. ಉಳಿದ ಮಂದಿಗೆ ಕೊನೆಗೆ ಒಟ್ಟು ಹಣ ನೀಡುವ ಭರವಸೆ ನೀಡಲಾಗಿತ್ತು. ಆದರೆ ಕಳೆದ ವರ್ಷ ಅದರ ಮುಖ್ಯಸ್ಥ ಶಶಿ ಪರಾರಿಯಾಗಿದ್ದ. ಆ ಬಳಿಕ ಸಂಸ್ಥೆಯ ಜವಾಬ್ದಾರಿ ವಹಿಸಿಕೊಂಡಿದ್ದ ಮಂಗ ಳೂರು ಪಡೀಲಿನ ವೀರನಗರ ನಿವಾಸಿ ಯಾದ ವಿನೋದ್ ಎಂಬಾತ ತಾನೇ ಈಗ ಎಂ.ಡಿ ಎಂದು ಹೇಳಿ ಕೊಂಡು ಸಂಸ್ಥೆಯನ್ನು ಮುನ್ನಡೆಸಿದ್ದ.

ಕಳೆದ ನಾಲ್ಕು ತಿಂಗಳಿಂದ ಗ್ರಾಹಕ ರಿಗೆ ಹಣ ನೀಡದೆ ಸತಾಯಿಸುತ್ತಿದ್ದ ವಿನೋದ್ ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದ. ಕಚೇರಿಗೂ ಬೀಗ ಹಾಕಲಾಗಿತ್ತು . ಇದರಿಂದಾಗಿ ವಂಚಿತ ಗ್ರಾಹಕರು ಗುರುವಾರ ಕಚೇರಿಗೆ ಆಗಮಿ ಸಿದ್ದ ವಿನೋದ್‌ನನ್ನು ಎಳೆದುಕೊಂಡು ಪೊಲೀಸ್ ಠಾಣೆಗೆ ತಂದಿದ್ದರು.

ಆರಂಭದಲ್ಲಿ ನಾನು ಸಂಸ್ಥೆಯ ಕೆಲಸದಾಳು, ಹಣ ಸಂಗ್ರಹ ಮಾತ್ರ ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದ ವಿನೋದ್ ಹಲವು ಮಂದಿಯ ಹೆಸರು ಹೇಳಿ ಬಜಾ ವ್ ಆಗಲು ಪ್ರಯತ್ನಿಸಿದ್ದ. ಪೊಲೀ ಸರು ಪುತ್ತೂರು ಸಂಸ್ಥೆಯಲ್ಲಿ ದುಡಿಯುತ್ತಿದ್ದ ಕೆಲವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಆತನೇ ಈಗ ಸಂಸ್ಥೆಯನ್ನು ನಡೆಸುತ್ತಿರುವ ವಿಚಾರ ತಿಳಿದು ಬಂದಿತ್ತು. ಆ ಸಂದರ್ಭದಲ್ಲಿ ವಿನೋದ್ ರೂ.೪ ಲಕ್ಷವನ್ನು ಹಿಂತಿರುಗಿಸುವುದಾಗಿ ಭರವಸೆ ನೀಡ ತೊಡಗಿದ್ದ. ನೀವು ಲಿಖಿತ ದೂರು ನೀಡಿದರೆ ನಾವು ವಿನೋದ್ ನನ್ನು ಬಂಧಿಸಿ ಜೈಲಿಗೆ ಕಳುಹಿಸುತ್ತೇವೆ ಎಂದು ಪುತ್ತೂರಿನ ಇನ್ಸ್‌ಪೆಕ್ಟರ್ ಶ್ರೀಕಾಂತ್ ಅವರು ಹೇಳಿದರೂ ವಿನೋದ್‌ನ ಭರವಸೆಯನ್ನು ನಂಬಿ ಯಾರೊಬ್ಬರೂ ದೂರು ನೀಡಲು ಮುಂದಾಗಿರಲಿಲ್ಲ.

ಈ ಸಂದರ್ಭದಲ್ಲಿ ಠಾಣೆಯ ಹೊರಹೋಗಿ ವಿನೋದ್ ಜೊತೆ ಮಾತುಕತೆ ನಡೆಸಿದ ವಂಚಿತ ಗ್ರಾಹಕರು ನಾವು ವಕೀಲರ ಮೂಲಕ ನಮಗೆ ಬರಬೇಕಾದ ಹಣದ ಕುರಿತು ಛಾಪಾ ಕಾಗದದಲ್ಲಿ ಬರೆಸಿಕೊಳ್ಳುತ್ತೇವೆ ಎಂದು ಪೊಲೀಸರ ಮುಂದೆ ತಿಳಿಸಿದರು. ಇದರಿಂದಾಗಿ ಪೊಲೀಸರು ಈ ಪ್ರಕ ರಣವನ್ನು ಅರ್ಧದಲ್ಲೇ ಕೈಬಿಡಬೇಕಾ ಯಿತು ಮಾತ್ರವಲ್ಲದೆ ಗೋಲ್‌ಮಾಲ್ ಪ್ರಕರಣವೂ ಅಲ್ಲಗೇ ಠುಸ್ ಆಯಿತು.

ವಯನಾಡಿನ ಶಶಿ ನೇತೃತ್ವದಲ್ಲಿ ಮಂಗಳೂರಿನ ಕದ್ರಿ ಠಾಣಾ ವ್ಯಾಪ್ತಿಯಲ್ಲಿ ಚಿಟ್ ಎಂಡ್ ಫಿನ್ ಚಿಟ್ ಫಂಡ್ ಸಂಸ್ಥೆ ನಡೆಯುತ್ತಿತ್ತು . ಅಲ್ಲಿಯೂ ಗೋಲ್ ಮಾಲ್ ನಡೆದು ವರ್ಷದ ಹಿಂದೆಯೇ ಬಂದ್ ಆಗಿತ್ತು. ಅಲ್ಲಿನ ಕೆಲವೊಂದು ಗ್ರಾಹಕರಿಗೆ ಹಣ ವಾಪಾಸು ಮಾಡಲಾಗಿತ್ತು ಎಂದು ತಿಳಿದು ಬಂದಿದೆ. ಆದರೆ ಕಾಸರ ಗೋಡಿನ ಸಂಸ್ಥೆಯಲ್ಲಿ ನಡೆದ ವಂಚನೆಗೆ ಸಂಬಂಧಿಸಿ ಕಾಸರಗೋಡಿನಲ್ಲಿ ಪ್ರಕರಣವೂ ದಾಖಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Advertisements