ಮಸೀದಿ ಆಡಳಿತ ಹಸ್ತಾಂತರವಾಗಿಲ್ಲ: ತಣ್ಣೀರುಬಾವ ಿ ಜಮಾತ್ ಅಧ್ಯಕ್ಷರ ಹೇಳಿಕೆ

Posted on April 16, 2011

0


ಮಂಗಳೂರು: ಮಸೀದಿ ಆಡಳಿತ ವನ್ನು ನೂತನ ಅಧ್ಯಕ್ಷರಿಗೆ ಹಸ್ತಾಂತರಿಸ ಬೇಕಾಗಿದ್ದ ದಿನದ ಸಭೆಗೆ ಆಡಳಿತ ಸಮಿತಿ ಪದಾಧಿಕಾರಿಗಳು ಹಾಜ ರಾಗದಿದ್ದ ಕಾರಣ ಅಧಿಕಾರ ಹಸ್ತಾಂತರಿಸಿಲ್ಲ ಎಂದು ತಣ್ಣೀರುಬಾವಿ ಜುಮಾ ಮಸೀದಿಯ ಅಧ್ಯಕ್ಷರು ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ಈ ಮಸೀದಿಯ ಕಾಮಗಾರಿಯಲ್ಲಿ ಅವ್ಯವ ಹಾರ ನಡೆದಿದೆ ಎಂದು ಕೆಲವು ಮಂದಿ ಆರೋಪಿಸಿದ್ದ ಕಾರಣ ಆಡಳಿತಾಧಿಕಾರಿ ಮಸೀದಿಗೆ ಭೇಟಿ ನೀಡಿದ್ದು ಆ ವೇಳೆ ಹೊಡೆದಾಟವೂ ನಡೆದಿತ್ತು. ಇದು ಪತ್ರಿಕೆಗಳಲ್ಲೂ ಪ್ರಕಟಗೊಂಡಿತ್ತು.

ಆದರೆ ಇದರ ಬಗ್ಗೆ ಪ್ರತಿಕ್ರಿಯಿ ಸಿರುವ ಮಸೀದಿ ಅಧ್ಯಕ್ಷ ಎ.ಎಸ್. ಸಿದ್ದೀಕ್ ಮಸೀದಿ ಆಡಳಿತ ವನ್ನು ಅಬ್ದುಲ್ ಮಜೀದ್ ಅವರಿಗೆ ಹಸ್ತಾಂv ರಿಸುವ ದಿನ ಆಡಳಿತ ಸಮಿತಿ ಪದಾಧಿ ಕಾರಿಗಳು ಊರಲ್ಲಿ ಇರಲಿಲ್ಲ. ಅಲ್ಲದೆ ದಿ.೧೨ರಂದು ಉಚ್ಛ ನ್ಯಾಯಾಲಯ ಆಡಳಿತ ಹಸ್ತಾಂತರ ಆದೇಶಕ್ಕೆ ತಡೆ ನೀಡಿದೆ ಎಂದರು.

ಅದೇ ದಿನ ವಕ್ಫ್ ಬೋರ್ಡ್ ಸಿ.ಓ. ಮತ್ತು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರು ಮಸೀದಿಗೆ ಭೇಟಿ ನೀಡಿ ಕಾಮಗಾರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿ ಸಿದ್ದಲ್ಲದೆ, ಮಂಗಳೂರು ಎಸಿಯವರನ್ನು ಸಂಪರ್ಕಿಸಿ ಚುನಾವಣೆ ಮೂಲಕ ಸಮಿತಿ ರಚಿಸುವಂತೆ ಆದೇಶಿಸಿದ್ದಾರೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ.

Advertisements