ಮದುವೆ ವಂಚನೆ: ದೂರು

Posted on April 16, 2011

0


ಪಡುಬಿದ್ರಿ: ಕುಂದಾಪುರ ಆನೆಗುಡ್ಡೆ ಗಣಪತಿ ದೇವಸ್ಥಾನದಲ್ಲಿ ಮದುವೆಯಾದ ಹುಡುಗ ಈಗ ಮತ್ತೊಂದು ಮದುವೆಗೆ ಹವಣಿಸುತ್ತಿ ದ್ದಾನೆಂದು ಆತನ ಪತ್ನಿ ಕಾಪು ಠಾಣೆ ಯಲ್ಲಿ ದೂರು ಸಲ್ಲಿಸಿದ ವಿಲಕ್ಷಣ ಘಟನೆ ಸಂಭವಿಸಿದೆ.

ಕಟಪಾಡಿ ಮಟ್ಟು ಗ್ರಾಮದ ಶಿವಕೃಪಾ ಮನೆಯ ಸಿ.ಬಿ. ಸುವರ್ಣ ಎಂಬವರ ಮಗಳು ಗೀತಾ ಹಾಗೂ ಅಲ್ಲಿಯ ಸಮೀಪದ ನಿವಾಸಿ ಪುಷ್ಪ ರಾಜ್ ಎಂಬವರು ಸುಮಾರು ೧೫ ವರ್ಷದಿಂದ ಒಬ್ಬರನ್ನೊಬ್ಬರು ಪ್ರೀತಿಸು ತ್ತಿದ್ದರು ಎನ್ನಲಾಗಿದೆ. ಮದುವೆಯ ಧ್ಯೋತಕವಾಗಿ ಅವರು ಕುಂದಾಪುರ ಸಮೀಪದ ಆನೆಗುಡ್ಡೆ ಮಹಾಗಣಪತಿ ದೇವಸ್ಥಾನದಲ್ಲಿ ಗಾಂಧರ್ವ ವಿವಾಹ ಮಾಡಿಕೊಂಡು ಒಂದೇ ಮನೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ.

ಅಂತೆಯೇ ಪುಷ್ಪರಾಜ್ ಹಲ ವಾರು ವರ್ಷದಿಂದ ಒತ್ತಾಯವಾಗಿ ಗೀತಾಳ ದೈಹಿಕ ಸಂಪರ್ಕ ಬೆಳೆಸಿದ್ದ ಎನ್ನಲಾಗಿದೆ. ಇದೀಗ ಪುಷ್ಪರಾಜ್ ಬೇರೆ ಮದುವೆ ಆಗ ಬಯಸಿದ್ದು, ಆದ್ದರಿಂದ ಗೀತಾಳನ್ನು ಮನೆಯಿಂದ ಒತ್ತಾಯ ಪೂರ್ವಕವಾಗಿ ಹೊರಹಾಕ ಬಯಸು ತ್ತಿದ್ದಾನೆ. ಹೋಗದಿದ್ದರೆ ಕೊಲ್ಲುವ ಬೆದರಿಕೆ ಒಡ್ಡಿದ್ದಾನೆ ಎಂದು ಗೀತಾ ಕಾಪು ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಕಾಪು ಠಾಣಾಧಿಕಾರಿ ಮೋಹನ ಕೊಟ್ಟಾರಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Advertisements
Posted in: Crime News