ಬೆಂಗಳೂರಿನಲ್ಲಿ ಶೂಟೌಟ್

Posted on April 16, 2011

0


ಬೆಂಗಳೂರು: ಬೆಂಗಳೂರಿನ ಮೈಸೂರು ರಸ್ತೆ ಕೆಂಗೇರಿ ಬಳಿಯಿರುವ ಉತ್ತರ ಹಳ್ಳಿ ಮುಖ್ಯರಸ್ತೆಯಲ್ಲಿ ಹಾಡ ಹಗಲೇ ಶೂಟೌಟ್ ನಡೆದಿದೆ

ಪೊಲೀಸ್ ಮಾಹಿತಿದಾರ ಧನರಾಜ್ ಮೇಲೆ ಶಿವಮೊಗ್ಗದ ರೌಡಿ ಅಕ್ರಂ ಗುಂಡಿನ ದಾಳಿ ನಡೆಸಿದ್ದು, ಗಾಯಾಳು ಧನರಾಜ್‌ನನ್ನು ಬಿಜೆಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ರಂ ಅಣ್ಣ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಪೊಲೀಸ್ ಮಾಹಿತಿ ದಾರನಾದ ಧನರಾಜ್ ಅಣ್ಣನ ಬಂಧ ನಕ್ಕೆ ಸಹಕರಿಸಿದ್ದಾನೆ ಎನ್ನುವ ಕೋಪ ದಿಂದ ದಾಳಿ ನಡೆಸಿರುವುದಾಗಿ ಮೂಲ ಗಳು ತಿಳಿಸಿವೆ.

ಗುಂಡು ಹಾರಿಸಿದ ರೌಡಿ ಅಕ್ರಂ ಪರಾರಿಯಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದು, ಶೀಘ್ರದಲ್ಲಿ ಬಂಧಿಸುವ ಸಾಧ್ಯತೆಗಳಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Advertisements