ಬಿಜೆಪಿ ಭಿನ್ನಮತ: ಮತ್ತೊಂದು ಸುತ್ತಿನ ಪರಿಶೀಲನ ೆ

Posted on April 16, 2011

0


ಬೆಂಗಳೂರು: ಯಡಿಯೂರಪ್ಪ ವಿರುದ್ಧ ಎದ್ದಿರುವ ಅಸಮಾಧಾನಕ್ಕೆ ತೆರೆ ಎಳೆಯಲು ವರಿಷ್ಠರು ವೀಕ್ಷಕರನ್ನು ಇದೇ ೨೪ರಂದು ರಾಜ್ಯಕ್ಕೆ ಕಳುಹಿಸಿಕೊಡುತ್ತಿದ್ದಾರೆ. ವೀಕ್ಷಕರು ಬರುವುದಕ್ಕೂ ಮುನ್ನ ರಾಜ್ಯದ ಉಸ್ತುವಾರಿ ಹೊಣೆ ಹೊತ್ತ ಧರ್ಮೇಂದ್ರ ಪ್ರಧಾನ್ ನಗರಕ್ಕೆ ಆಗಮಿಸಿ ಪಕ್ಷದ ವಿವಿಧ ಮುಖಂಡರೊಟ್ಟಿಗೆ ಸಮಾಲೋಚನೆ ಮಾಡಲಿದ್ದಾರೆ.

ಭುಗಿಲೆದ್ದಿರುವ ಅಸಮಾಧಾನ ವನ್ನು ಹೋಗಲಾಡಿಸುವುದಷ್ಟೇ ಪ್ರಧಾನ್ ಅವರ ಗುರಿಯಾಗಿದ್ದು, ಪ್ರಧಾನ್ ಹಿಂತಿರುಗುತ್ತಿದ್ದಂತೆ ವೀಕ್ಷಕರು ನಗರಕ್ಕೆ ಬರಲಿದ್ದಾರೆ. ಪಕ್ಷದ ಪ್ರತೀ ಶಾಸಕರ ಅಭಿಪ್ರಾಯವನ್ನು ಪಡೆಯುವುದಲ್ಲದೆ ಯಡಿಯೂರಪ್ಪ ಅವರನ್ನೂ ಮುಖ್ಯ ಮಂತ್ರಿಯನ್ನಾಗಿ ಮುಂದುವರಿಸಬೇಕೇ ಬೇಡವೇ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲಿದ್ದಾರೆ. ಪ್ರತಿಯೊಬ್ಬ ಶಾಸಕರು ಯಡಿಯೂರಪ್ಪರಿಗೆ ಸಂಬಂಧಿಸಿದ ವಿವರಗಳನ್ನು ನೀಡಬೇಕಾಗುತ್ತದೆ.

Advertisements
Posted in: State News