ಬಸ್ ಡಿಕ್ಕಿ: ವೃದ್ಧೆ ಮೃತ್ಯು

Posted on April 16, 2011

0


ಮಂಗಳೂರು: ಕಾಞಂಗಾಡಿನ ಮಡಿಕೈ ಸಮೀಪ ಬಸ್ ಡಿಕ್ಕಿಯಾಗಿ ಬಸ್ ಕಾಯುತ್ತಿದ್ದ ವೃದ್ಧೆಯೋರ್ವರು ಮೃತಪಟ್ಟಿದ್ದಾರೆ.

ಕಾಞಂಗಾಡಿನ ಎರಿಪ್ಪ್ ನಿವಾಸಿ ಎಂ. ಮಾಣಿಯಮ್ಮ (೭೬) ಮೃತ ರಾಗಿದ್ದು, ನಿಲೇಶ್ವರದಿಂದ ಕಾಞಂ ಗಾಡಿಗೆ ಬರುತ್ತಿದ್ದ ಖಾಸಗಿ ಬಸ್ ಡಿಕ್ಕಿ ಹೊಡೆದಿತ್ತು. ಎರಿಪ್ಪಿನಲ್ಲಿರುವ ಕಾಞರಪೋಯಿಲ್‌ನಲ್ಲಿ ವಾಸಿಸುವ ಹಿರಿಯ ಪುತ್ರನ ಮಗುವಿನ ಆರಂಭದ ವಿಷು ಆಚರಣೆಗೆಂದು ಹೋಗಲು ಬಸ್‌ಗಾಗಿ ಕಾಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

Advertisements
Posted in: Crime News