ಬಂಟ್ವಾಳ: ಸಿಡಿಲಿಗೆ ತಾಯಿ-ಮಗಳು ಬಲಿ

Posted on April 16, 2011

0


ಮಂಗಳೂರು: ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ನರಿ ಕೊಂಬು ಗ್ರಾಮದ ಕಲ್ಲಗುಡ್ಡೆ ಎಂಬಲ್ಲಿ ನಿನ್ನೆ ತಡರಾತ್ರಿ ಮನೆಯೊಂದಕ್ಕೆ ಸಿಡಿಲು ಬಡಿದ ಪರಿಣಾಮ ತಾಯಿ-ಮಗಳು ಸ್ಥಳದಲ್ಲೇ ಮೃತ್ಯುವಶರಾದ ಘಟನೆ ನಡೆದಿದೆ.

ಮೃತರನ್ನು ಕಲ್ಲಗುಡ್ಡೆ ನಿವಾಸಿ ಗಳಾದ ಸೀತಾ(೪೦) ಮತ್ತು ಆಕೆಯ ಪುತ್ರಿ ಗಾಯತ್ರಿ(೧೬) ಎಂದು ಗುರುತಿಸ ಲಾಗಿದೆ. ನಿನ್ನೆ ತಡರಾತ್ರಿ ೧೧:೩೦ ರ ಸುಮಾರಿಗೆ ಘಟನೆ ನಡೆದಿದ್ದು, ಈ ವೇಳೆ ಸೀತಾ ತನ್ನ ಓರ್ವ ಪುತ್ರ ಹಾಗೂ ಓರ್ವ ಪುತ್ರಿಯ ಜತೆ ಮನೆ ಯಲ್ಲಿ ನಿದ್ರಿಸುತ್ತಿದ್ದರು ಎನ್ನಲಾಗಿದೆ. ಮನೆಯ ಮೀಟರ್‌ಬೋರ್ಡ್‌ಗೆ ಬಡಿದ ಸಿಡಿಲು ಬಳಿಕ ಮನೆಯ ಬಾಗಿಲಿಗೆ ಬಡಿದು ಅನಾಹುತ ಸಂಭವಿಸಿದೆ. ಬಾಗಿಲಿನ ಸಮೀಪವೇ ಮಲಗಿದ್ದ ಸೀತಾ ಹಾಗೂ ಗಾಯತ್ರಿ ಸಿಡಿಲಿನ ಆಘಾತಕ್ಕೆ ಸ್ಥಳದಲ್ಲೇ ಮೃತರಾಗಿದ್ದರೆ, ಮಗ ಹರೀಶ(೧೩)ನಿಗೆ ಗಂಭೀರ ಗಾಯಗಳುಂಟಾಗಿದ್ದು, ಬಂಟ್ವಾಳ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತ್ತಿದ್ದಾನೆ. ಮನೆಯ ಕಾಂಕ್ರೀಟ್ ದಾರಂದ, ಬಾಗಿಲು ಸಂಪೂರ್ಣ ಹಾನಿಗೊಳಗಾಗಿದ್ದು ನೆಲದಲ್ಲಿ ಆಳ ವಾದ ಗುಂಡಿ ಬಿದ್ದಿದೆ. ವಿದ್ಯುತ್ ವೈರಿಂಗ್ ಸಂಪೂರ್ಣ ಸುಟ್ಟು ಹೋಗಿದ್ದು, ನಷ್ಟ ಸಂಭವಿಸಿದೆ.

ಸುದ್ದಿ ತಿಳಿದ ತಕ್ಷಣ ಬಂಟ್ವಾಳ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸಾರ್ವಜ ನಿಕರು ಘಟನಾ ಸ್ಥಳಕ್ಕೆ ಬಂದು ಗಾಯಗೊಂಡಿರುವ ಹರೀ ಶನನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾಗಿದ್ದಾರೆ.

ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ರಾತ್ರಿ ೧೧:೩೦ ನಂತರ ಸಿಡಿಲಿನ ಆರ್ಭಟದೊಂದಿಗೆ ಭಾರೀ ಗಾಳಿ-ಮಳೆ ಸುರಿದಿದ್ದು, ಈ ವೇಳೆ ಬಡಿದ ಸಿಡಿಲು ಒಂದೇ ಮನೆಯ ಇಬ್ಬರನ್ನು ಪಲಿ ತೆಗೆದುಕೊಂಡಿದೆ. ಮೃತರು ಬಡ ಕುಟುಂಬದ ಹಿನ್ನೆಲೆಯನ್ನು ಹೊಂದಿದ್ದು, ಪುಟ್ಟದಾದ ಹಂಚಿನ ಮನೆಯಲ್ಲಿ ಸೀತಾ ತನ್ನ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಬಡತನದ ಬೇಗೆಯಿಂದ ಬಳಲುತ್ತಿದ್ದ ಕುಟುಂಬಕ್ಕೆ ಸಿಡಿಲು ಬಡಿದು ಇಬ್ಬರು ಬಲಿಯಾಗಿ ಓರ್ವ ಪುತ್ರ ಮಾತ್ರ ಬದುಕಿರುವುದು ವಿಧಿಯ ವಿಪರ್ಯಾಸ ಎನ್ನಬಹುದು.

ಸಿಡಿಲು-ಮಳೆಗೆ ಭಾರೀ ಹಾನಿ: ನಿನ್ನೆ ತಡರಾತ್ರಿ ಬಂಟ್ವಾಳ ತಾಲೂಕಿನಾದ್ಯಂತ ಸುರಿದ ಭಾರೀ ಗಾಳಿ-ಮಳೆಗೆ ಅಲ್ಲಲ್ಲಿ ಮರಗಳು ಧರೆಗುರುಳಿದ್ದು ಭಾರೀ ಹಾನಿ ಸಂಭವಿಸಿದೆ. ತಾಲೂಕಿನ ವಿವಿಧೆಡೆ ಟೆಲಿಫೋನ್ ತಂತಿಗಳು ತುಂಡರಿಸಲ್ಪಟ್ಟಿದ್ದು ಫೋನ್ ಸದ್ದು ಮಾಡುತ್ತಿಲ್ಲ. ಹಲವು ಮನೆಗಳ ವಿದ್ಯುತ್ ವೈರಿಂಗ್ ಸಂಪೂರ್ಣ ಸುಟ್ಟುಹೋಗಿದ್ದು ನಷ್ಟ ಸಂಭವಿಸಿದೆ.

Advertisements