ಪ್ರೇಯಸಿಯನ್ನು ಅಂಗಡಿಯಲ್ಲಿ ಕೂಡಿ ಹಾಕಿದ ಪೊಲೀಸ ನ ಮಗ

Posted on April 16, 2011

0


ಮಂಗಳೂರು: ಎರಡು ವರ್ಷ ಗಳಿಂದ ಪ್ರೀತಿಸುತ್ತಿದ್ದ ಹುಡುಗಿಯನ್ನು ಆಕೆಯ ಮನೆಯವರಿಂದ ತಪ್ಪಿಸಿ ಬಜಪೆ ಜ್ಯುವೆಲ್ಲರಿ ಅಂಗಡಿಯೊಂದರಲ್ಲಿ ಎರಡು ದಿನಗಳ ಕಾಲ ಕೂಡಿ ಹಾಕಿರುವ ಘಟನೆ ಬಜಪೆಯಲ್ಲಿ ನಡೆದಿದ್ದು, ಬಳಿಕ ಯುವತಿ ಮನೆಮಂದಿ ಹುಡುಕಿ ಪ್ರಿಯ ಕರನನ್ನು ಪೊಲೀಸರಿಗೊಪ್ಪಿಸಿದ್ದಾರೆ.

ಜಿಲ್ಲೆಯ ಹಲವು ಠಾಣೆಯಲ್ಲಿ ಸೇವೆ ಸಲ್ಲಿಸಿ ಇದೀಗ ಬೇರೆ ಜಿಲ್ಲೆಗೆ ವರ್ಗಾವಣೆಗೊಂಡಿರುವ ಪೊಲೀಸ್ ಒಬ್ಬರ ಪುತ್ರನೋರ್ವ ಕಿನ್ನಿಗೋಳಿಯ ಸ್ಥಳೀಯ ಶಾಲೆಯಲ್ಲಿ ಪದವಿ ಕಲಿಯುತ್ತಿದ್ದ ಪ್ರತಿಷ್ಠಿತ ಬಂಟ ಸಮು ದಾಯಕ್ಕೆ ಸೇರಿದ ವಿದ್ಯಾರ್ಥಿನಿಯನ್ನು ಪ್ರೀತಿಸುತ್ತಿದ್ದ. ಈ ಬಗ್ಗೆ ಹುಡುಗಿ ಮನೆಯವರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಮಲಯಾಳಿ ಬಿಲ್ಲವ ಸಮು ದಾಯಕ್ಕೆ ಸೇರಿದ ಪ್ರಿಯಕರ ಆಕೆ ಯನ್ನು ತನ್ನದಾಗಿಸಲು ಮನೆಯವರ ಅನುಮತಿ ಪಡೆದಿದ್ದಾನೆನ್ನಲಾಗಿದೆ. ಆದರೆ ಪ್ರಿಯತಮೆಯನ್ನು ಬೆಂಬಿಡದೆ ಆತ ಆಕೆಯನ್ನು ತಿರುಗಾಡಲು ಕರೆ ದೊಯ್ಯುತ್ತಿದ್ದ. ಬಿಂದಾಸ್ ಸ್ವಭಾವ ದವಳಾಗಿರುವ ಹುಡುಗಿ ಈತನೊಂದಿಗೆ ನಿತ್ಯವೂ ಸುತ್ತಾಡುವ ಪರಿಪಾಠ ಹೊಂದಿ ದ್ದಳು. ಇದೇ ರೀತಿ ಬುಧವಾರ ದಂದು ಮನೆಯಿಂದ ಹೊರಹೋದವಳು ನಾಪತ್ತೆಯಾಗಿದ್ದಳು. ಮನೆಮಂದಿ ಗಾಬರಿಗೊಂಡು ಪೊಲೀಸರಲ್ಲಿ ಹುಡುಗ ಅಪಹರಣ ಮಾಡಿದ್ದಾನೆಂಬ ದೂರನ್ನು ದಾಖಲಿಸಿದರು. ಆದರೆ ಅವರಿಗೆ ಹುಡುಗ ತಮ್ಮದೇ ವಲಯದವರ ಮಗನೆಂದು ಪ್ರಕರಣದಲ್ಲಿ ಹೆಚ್ಚು ವಹಿಸಿರಲಿಲ್ಲ.

ಆದರೆ ಹುಡುಗಿ ಮನೆಮಂದಿಗೆ ಸ್ಥಳೀಯರಾರೋ ನೀಡಿದ ಮಾಹಿತಿಯಂತೆ ಹುಡುಕಾಡಿದಾಗ ಆಕೆಯನ್ನು ಜ್ಯುವೆಲ್ಲರಿ ಅಂಗಡಿಯಲ್ಲಿ ಎರಡು ದಿನಗಳಿಂದ ಕೂಡಿ ಹಾಕಿದ್ದ ಬಗ್ಗೆ ಗೊತ್ತಾಯಿತು. ನಂತರ ಇಬ್ಬರನ್ನು ಬಜಪೆ ಠಾಣೆಗೆ ಕರೆದೊಯ್ಯಲಾಯಿತು. ಅಲ್ಲಿ ಯುವಕನಿಂದ ಪೊಲೀಸರು ಮುಚ್ಚಳಿಕೆ ಬರೆಸಿದ್ದಾರೆಂದು ತಿಳಿದುಬಂದಿದೆ. ಪ್ರಕರಣ ರಾಜಿಯಲ್ಲಿ ಇತ್ಯರ್ಥ ಗೊಂಡಿದೆ.

Advertisements