ಪ್ರೀತಿಸಿ ಅತ್ಯಾಚಾರವೆಸಗಿ ವಂಚಿಸಿದ ಯುವಕನಿಗೆ ಏಳು ವರ್ಷ ಸಜೆ

Posted on April 16, 2011

0


ಮಂಗಳೂರು: ಮದುವೆಯಾಗು ವುದಾಗಿ ನಂಬಿಸಿ, ಯುವತಿಯ ಜತೆ ನಿರಂತರ ದೈಹಿಕ ಸುಖ ಪಡೆದು ಕೊನೆಗೆ ಮದುವೆಗೆ ನಿರಾಕರಿಸಿ ವಂಚಿ ಸಿದ ಯುವಕನಿಗೆ ಏಳು ವರ್ಷಗಳ ಜೈಲು ಶಿಕ್ಷೆ ಹಾಗೂ ೧೦,೦೦೦ ರೂ. ದಂಡ ವಿಧಿಸಿ ಮಂಗಳೂರು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.

ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಖಂಡಿಗೆ ಪೆರ್ಲ ನಿವಾಸಿ ಶೇಷಪ್ಪ ಗೌಡ(೩೧) ಎಂಬಾತ ಆರೋಪಿಯಾಗಿದ್ದಾನೆ. ಈತ ತನ್ನದೇ ಗ್ರಾಮದ ೨೪ ವರ್ಷ ಪ್ರಾಯದ ಮಲೆಕುಡಿಯ ಜನಾಂಗಕ್ಕೆ ಸೇರಿದ ಯುವತಿಯ ಜತೆ ಸ್ನೇಹ ಬೆಳೆಸಿದ್ದ. ಈಕೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದ ಶೇಷಪ್ಪ ಗೌಡ ಕಳೆದ ೨೦೦೮ ನವೆಂಬರ್ ಒಂದರಂದು ಸಂಜೆ ಮದುವೆ ವಿಚಾರ ಮಾತಾಡಲೆಂದು ಮನೆ ಸಮೀಪದ ಖಂಡಿಗೆ ಪೆರ್ಲ ಎಂಬಲ್ಲಿಗೆ ಕರೆಸಿ ಕಲ್ಲಿನ ಕೋರೆಯ ನಿರ್ಜನ ಸ್ಥಳದಲ್ಲಿ ಬೀರ್ ಕುಡಿಸಿ ಅಮಲೇರುವಂತೆ ಮಾಡಿ ರಾತ್ರಿಯಿಡೀ ಆಕೆಯ ಜತೆ ಬಲವಂತದಿಂದ ದೈಹಿಕ ಸುಖ ಪಡೆದಿದ್ದ. ಆ ಬಳಿಕ ಯುವ ತಿಯ ಮನೆಯವರ ಬಳಿ ತಾನು ಧರ್ಮಸ್ಥಳದಲ್ಲಿ ಮದುವೆ ಆಗುತ್ತೇನೆ ಎಂದು ಕರೆಸಿ ತಲೆಮರೆಸಿದ್ದ. ಇದಾದ ಬಳಿಕ ಯುವತಿಗೆ ಫೋನ್ ಮೂಲಕ ಕೊಲೆ ಬೆದರಿಕೆ ಒಡ್ಡಿದ್ದ ಆರೋಪಿಯ ವಿರುದ್ಧ ಉಪ್ಪಿನಂಗಡಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಯುವತಿಯ ಅತ್ಯಾಚಾರ, ಅಮಲು ಪದಾರ್ಥ ಸೇವನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

Advertisements
Posted in: Crime News