ಪಶ್ಚಿಮ ಕರಾವಳಿ ಮೀನುಗಾರರ ಸಮಾವೇಶ

Posted on April 16, 2011

0


ಮಂಗಳೂರು: ವಿಶೇಷ ಆರ್ಥಿಕ ವಲಯ, ನಶಿಸುತ್ತಿರುವ ಮತ್ಸ್ಯ ಸಂತತಿ, ಕಾರ್ಖಾನೆ ತ್ಯಾಜ್ಯ, ಕರಾವಳಿ ನಿಯಂತ್ರಣ ವಲಯದ ನಿರ್ಬಂಧ… ಇವೇ ಮೊದಲಾದ ಸಮಸ್ಯೆಗಳನ್ನು ಮೀನುಗಾರರು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ಪಶ್ಚಿಮ ಕರಾವಳಿಯ ಮೀನುಗಾರರ ರಾಷ್ಟ್ರೀಯ ಸಮಾವೇಶ ಇದೇ ೨೯ರಿಂದ ೨ದಿನಗಳ ಕಾಲ ನಗರದಲ್ಲಿ ನಡೆಯಲಿದೆ. ಸಂಘನಿಕೇತನದಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ಕರ್ನಾಟಕದ ಜತೆಗೆ ಗುಜರಾತ್, ಮಹಾರಾಷ್ಟ್ರ, ಗೋವಾ, ದೀಯು ಮತ್ತು ಡಾಮನ್, ಕೇರಳ ಮತ್ತು ಲಕ್ಷ ದ್ವೀಪಕ್ಕೆ ಸೇರಿದ ಮೀನುಗಾರರ ಸಂಘದ ಪ್ರತಿನಿಧಿಗಳು ಭಾಗವಗಿಸಲಿ ದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ಮೀನುಗಾರರ ವೇದಿಕೆ ನಾಯಕ ಮುರಳೀಧರ್ ರಾವ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಮಾವೇಶದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್, ಯಡಿಯೂರಪ್ಪ ಭಾಗವ ಹಿಸಲಿ ದ್ದಾರೆ ಎಂದು ಹೇಳಿದರು. ಪತ್ರಿಕಾಗೋಷ್ಠಿ ಯಲ್ಲಿ ಶಾಸಕ ಲಾಲಾಜಿ ಮೆಂಡನ್, ರಾಮಚಂದರ್ ಬೈಕಂಪಾಡಿ ನಿತಿನ್‌ಕುಮಾರ್, ಶೋಭೇಂದ್ರ ಸಸಿಹಿತ್ಲು ಉಪಸ್ಥಿತರಿದ್ದರು.

Advertisements