ನಮೀಬಿಯಾ ವಿರುದ್ಧ ಯುಎಇಗೆ ಜಯ

Posted on April 16, 2011

0


ದುಬೈ: ಸಖೀಬ್ ಅಲಿ ತೋರಿಸಿದ ಆಲ್‌ರೌಂಡಿಗ್ ಆಟದ ನೆರವಿನಿಂದ ಇಲ್ಲಿ ನಮೀಬಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಯುನೈಟೆಡ್ ಅರಬ್ ಎಮಿರೆಟ್ಸ್ ಐದು ವಿಕೆಟ್‌ಗಳ ಜಯ ಸಾಧಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ನಮೀಬಿಯಾ ೪೯.೩ ಓವರ್‌ಗಳಲ್ಲಿ ೨೦೦ ರನ್‌ಗೆ ಸರ್ವಪತನ ಕಂಡಿತು. ಸೆರೆಲ್ ಬರ್ಜರ್ (೪೨) ಹಾಗೂ ಕ್ರೇಗ್ ವಿಲಿಯಮ್ಸ್ (೫೮) ಉತ್ತಮ ಮೊತ್ತ ದಾಖಲಿಸಿದರು. ಸಖಿಲ್ ಅಲಿ ಹಾಗೂ ನಜೀರ್ ಅಜೀಜ್ ತಲಾ ಮೂರು ವಿಕೆಟ್ ಪಡೆದರು. ಗುರಿ ಬೆನ್ನತ್ತಿದ್ದ ಯುಎಇ ೪೫.೩ ಓವರ್‌ಗಳಲ್ಲಿ ಐದು ವಿಕೆಟ್‌ಗಳ ನಷ್ಟಕ್ಕೆ ೨೦೧ ಗಳಿಸಿ ಗೆಲುವಿನ ನಗೆ ಕಂಡಿತು. ಆದರೆ ಯುಎಇ ಆರಂಭ ಉತ್ತಮವಾಗಿರಲಿಲ್ಲ. ೧೪ ರನ್ ಆಗುವಷ್ಟರಲ್ಲಿ ಎರಡು ವಿಕೆಟ್ ಕಳೆದುಕೊಂಡಿತು. ಆದರೆ ಅರ್ಷದ್ (೩೦) ಹಾಗೂ ಸಖೀಬ್ ಮೂರನೇ ವಿಕೆಟ್‌ಗೆ ಅರ್ಧಶತಕದ ಜೊತೆಯಾಟ ನಡೆಸಿ ಆಧರಿಸಿದರು. ಆದರೆ ಸಖೀಬ್ (೭೩) ನಂತರ ಬಂದ ಖುರ್ರಮ್ ಖಾನ್ (೬೦) ಜೊತೆ ಐದನೇ ವಿಕೆಟ್‌ಗೆ ಭರ್ತಿ ಶತಕದ ಜೊತೆಯಾಟ ನಡೆಸಿ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಕ್ಲಜಿಂಗಾ ಹಾಗೂ ಬರ್ಜರ್ ತಲಾ ಎರಡು ವಿಕೆಟ್ ಪಡೆದರು.

ಈ ಮೊದಲು ಬ್ಯಾಟಿಂಗ್ ನಡೆಸಿದ್ದ ನಮೀಬಿಯಾ ಆರಂಭದಲ್ಲಿ ೩೧ ರನ್‌ಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಈಡಾಗಿತ್ತು. ಆದರೆ ವಿಲಿಯಮ್ಸ್ ಹಾಗೂ ಬರ್ಜರ್ ಮೂರನೇ ವಿಕೆಟ್‌ಗೆ ೯೩ ರನ್‌ಗಳ ಜೊತೆಯಾಟ ನಡೆಸಿ ಚೇತರಿಕೆ ನೀಡಿದ್ದರು. ವಾನ್ ಸ್ಕೂರ್ (೩೯) ಕೂಡ ಕೆಲ ಹೊತ್ತು ಕ್ರೀಸ್‌ನಲ್ಲಿದ್ದರು.

Advertisements
Posted in: Sports News