ಚೆಕ್ ವಂಚನೆ: ತನಿಖೆಗೆ ಕೋರ್ಟ್ ನಿರ್ದೇಶನ

Posted on April 16, 2011

0


ಕಾರ್ಕಳ: ನಗರದ ಗಾಂಧಿ ಮೈದಾನ ಬಳಿಯ ಖಾಸಗಿ ಸಂಸ್ಥೆ ಯೊಂದಕ್ಕೆ ಚೆಕ್ ನೀಡಿ ವಂಚಿಸಿದ ಆರೋಪಿಯ ವಿರುದ್ಧ ತನಿಖೆ ನಡೆಸಿ ವರದಿ ನೀಡುವಂತೆ ನಗರ ಠಾಣಾಧಿ ಕಾರಿಗೆ ಕಾರ್ಕಳ ನ್ಯಾಯಾಲಯವು ನಿರ್ದೇಶಿಸಿದೆ.

ಶೆಣೈ ಪೋಲಿಮಾರ‍್ಸ್‌ನ ಮಾಲಕಿ ಎಂ.ಚಂದ್ರಿಕಾ ಶೆಣೈ ಅವರು ಈ ಬಗ್ಗೆ ಕಾರ್ಕಳ ನ್ಯಾಯಾಲಯಕ್ಕೆ ಸಲ್ಲಿಸಿರುವ ಖಾಸಗಿ ದೂರಿನ ಹಿನ್ನೆಲೆ ಯಲ್ಲಿ ನ್ಯಾಯಾಧೀಶರು ಮೇಲಿನ ನಿರ್ದೇಶನ ನೀಡಿದ್ದಾರೆಂದು ತಿಳಿದು ಬಂದಿದೆ.

ಮಂಗಳೂರು ಬಜಪೆಯ ಆಲ್‌ಸಲಾಂ ಎಂಟರ್‌ಪ್ರೈಸಸ್‌ನ ಮಾಲಕ ಮಹಮ್ಮದ್ ಶರೀಫ್‌ಗೆ ಕಾರ್ಕಳದ ಶೆಣೈ ಪೋಲಿಮಾರ‍್ಸ್ ಸಂಸ್ಥೆಯು ತಡಪಾಲ್ ಹಾಗೂ ನೈಲಾನ್ ರೋಪ್‌ಗಳನ್ನು ೨೦೦೯ ನವಂಬರ್ ೨೯ರಂದು ರಫ್ತು ಮಾಡಿತ್ತು. ಇದರ ಒಟ್ಟು ಮೌಲ್ಯ ೩೬,೨೭೬ ರೂ. ಎಂದು ತಿಳಿದು ಬಂದಿದೆ. ವ್ಯವಹಾರ ಕುದುರಿಸಿದಾಗ ಆಲ್‌ಸಲಾಂ ಎಂಟರ್ ಪ್ರಸಸ್‌ನಿಂದ ಶೆಣೈ ಪೋಲಿಮಾರ್ಗೆ ಕೆಥೋಲಿಕ್ ಕೋ-ಅಪರೇಟಿವ್ ಬ್ಯಾಂಕ್‌ನ ಚೆಕ್ ನೀಡಲಾಗಿತ್ತು. ಅದನ್ನು ಕಾರ್ಕಳದಲ್ಲಿರುವ ಇಂಡಿಂiiನ್ ಓವರ್ ಸೀಸ್ ಬ್ಯಾಂಕ್‌ನ ಶಾಖೆಯ ಖಾತೆಗೆ ಹಾಕಿದಾಗ ಖಾತೆಯಲ್ಲಿ ನಗದು ಇಲ್ಲದೆ ತಿರಸ್ಕೃತಗೊಂಡಿತ್ತು. ಹೀಗಾಗಿ ವಂಚನೆ ಗೊಳಗಾದ ಸಂಸ್ಥೆಯ ಮಾಲಕಿ ಯಾಗಿರುವ ನಗರದ ಎಸ್.ವಿ.ಟಿ ವಿದ್ಯಾಸಂಸ್ಥೆ ಬಳಿಯಲ್ಲಿರುವ ಭಾರತ್ ಬೀಡಿ ಕಾಲನಿಯ ನಿವಾಸಿ ಎಂ.ಚಂದ್ರಿಕಾ ಶೆಣೈ ಅವರು ಆರೋಪಿ ಬಜಪೆಯ ಮಹಮ್ಮದ್ ಶರೀಫ್ ವಿರುದ್ಧ ಕಾರ್ಕಳ ನ್ಯಾಯಾಲಯಕ್ಕೆ ಖಾಸಗಿ ದೂರೊಂದನ್ನು ಸಲ್ಲಿಸಿದ್ದರು.

Advertisements