ಕೊಲ್ಕತ್ತಾ ಅಬ್ಬರಕ್ಕೆ ರಾಜಸ್ಥಾನ್ ಸ್ತಭ

Posted on April 16, 2011

0


ಜೈಪುರ್: ಗೌತಮ್ ಗಂಭೀರ್ ಹಾಗೂ ಜ್ಯಾಕ್ ಕ್ಯಾಲೀಸ್ ನಡೆಸಿದ ಭರ್ಜರಿ ಜೊತೆಯಾಟದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ ಒಂಬತ್ತು ವಿಕೆಟ್‌ಗಳ ಜಯ ಸಾಧಿಸಿ ಟೂರ್ನಿ ಯಲ್ಲಿ ಸತತ ಎರಡನೇ ಗೆಲುವು ಕಂಡಿದೆ.

ಟಾಸ್ ತನ್ನ ಪರವಾಗಿ ಬಂದ ರೂ ಫೀಲ್ಡಿಂಗ್ ನಡೆಸುವ ನಿರ್ಧಾರ ವನ್ನು ಕೊಲ್ಕತ್ತಾ ತೆಗೆದು ಕೊಂಡಿತು. ಬ್ಯಾಟಿಂಗ್ ನಡೆಸಿದ ರಾಜಸ್ಥಾನ್ ೨೦ ಓವರ್‌ಗಳಲ್ಲಿ ನಾಲ್ಕು ವಿಕೆಟ್ ಕಳದು ಕೊಂಡು ೧೫೯ ರನ್ ಪೇರಿಸಿತು. ರಾಹುಲ್ ದ್ರಾವಿಡ್ (೩೫) ಹಾಗೂ ರಾಸ್ ಟೇಲರ್ (೩೫) ಉತ್ತಮವಾಗಿ ಪ್ರದರ್ಶನ ನೀಡಿದರು. ಶಕಿಬುಲ್ ಹಸನ್ ಹಾಗೂ ಯೂಸುಫ್ ಪಠಾಣ್ ತಲಾ ಎರಡು ವಿಕೆಟ್ ಕಬಳಿಸಿದರು. ಗುರಿ ಬೆನ್ನತ್ತಿದ್ದ ಕೊಲ್ಕತ್ತಾ ಬ್ಯಾಟಿಂಗ್ ನಲ್ಲಿ ಪರಾಕ್ರಮ ತೋರಿತು. ೧೮.೩ ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್ ಗಳ ನಷ್ಟಕ್ಕೆ ೧೬೦ ದಾಖಲಿಸಿ ಗೆಲುವಿನ ನಗೆ ಬೀರಿತು. ಎಂಟು ರನ್ ಆಗುವಷ್ಟ ರಲ್ಲಿಯೇ ಕೊಲ್ಕತ್ತಾ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಬಿಸ್ಲಾ ಕೇವಲ ಒಂದು ರನ್‌ಗೆ ತೃಪ್ತಿಪಟ್ಟು ಕೊಂಡರು. ಆ ನಂತರ ಜೊತೆಗೂಡಿದ ನಾಯಕ ಗಂಭೀರ್ ಹಾಗೂ ಕ್ಯಾಲೀಸ್ ಅಜೇಯ ಮ್ಯಾರಥಾನ್ ಜೊತೆ ಯಾಟ ನಡೆಸಿದರು. ಎರಡನೇ ವಿಕೆಟ್‌ಗೆ ಈ ಜೋಡಿ ಕೇವಲ ೧೭.೧ ಓವರ್‌ಗಳಲ್ಲಿ ೮.೮೫ರ ಸರಾಸರಿಯಂತೆ ಬರೊಬ್ಬರಿ ೧೫೨ ರನ್ ಕಲೆಹಾಕಿ ತಂಡಕ್ಕೆ ಭರ್ಜರಿ ಜಯ ತಂದು ಕೊಟ್ಟರು. ಗಂಭೀರ್ ೪೪ ಎಸೆತಗಳಲ್ಲಿ ಒಂದು ಸಿಕ್ಸ್ ಹಾಗೂ ೧೧ ಬೌಂಡರಿಗಳ ನೆರವಿನಿಂದ ೭೫ ರನ್ ಪೇರಿಸಿದರೆ ಕ್ಯಾಲೀಸ್ ಕೂಡ ತನ್ನ ಅರ್ಧಶತಕದ (೮೦) ಇನ್ನಿಂಗ್ಸ್‌ನಲ್ಲಿ ಎರಡು ಸಿಕ್ಸ್ ಹಾಗೂ ಏಳು ಬೌಂಡರಿ ಗಳನ್ನು ಬಾರಿಸಿದ್ದರು.

ಈ ಮುಂಚೆ ಬ್ಯಾಟಿಂಗ್ ನಡೆಸಿದ್ದ ರಾಜಸ್ಥಾನ್ ಪೌನಿಕರ್ (೯) ವಿಕೆಟ್ ಬೇಗನೇ ಕಳೆದುಕೊಂಡಿತು. ಆದರೆ ನಂತರ ಬಂದ ಮನೇರಿಯಾ ಆರಂಭಿಕ ದ್ರಾವಿಡ್ ಜೊತೆಗೂಡಿ ಅರ್ಧಶತಕದ ಜೊತೆಯಾಟ ನಡೆಸಿಕೊಟ್ಟರು. ರನ್ ಗಳಿಸುವ ಆತುರದಲ್ಲಿ ಉತ್ತಮವಾಗಿ ಆಡುತ್ತಿದ್ದ ದ್ರಾವಿಡ್ ಹಾಗೂ ಮನೇರಿ ಯಾ (೨೭) ತನ್ನ ವಿಕೆಟ್ ಕಳೆದು ಕೊಂಡಾಗ ತಂಡ ಆಘಾತ ಕಂಡಿತು. ನಂತರ ಜೊತೆಗೂಡಿದ ಸ್ಫೋಟಕ ಆಟ ಗಾರರಾದ ವಾಟ್ಸನ್ ಹಾಗೂ ಟೇಲರ್ ಜೋಡಿ ನಾಲ್ಕನೇ ವಿಕೆಟ್‌ಗೆ ೪.೫ ಓವರ್‌ಗಳಲ್ಲಿ ೪೫ ರನ್ ಕಲೆಹಾಕಿದರು. ಆದರೆ ೧೩ ಎಸೆತಗಳಲ್ಲಿ ಎರಡು ಸಿಕ್ಸ್‌ಗಳ ನೆರವಿನಿಂದ ೨೨ ರನ್ ದಾಖಲಿಸಿದ್ದ ವಾಟ್ಸನ್ ನಿರ್ಗಮಿಸಿದರು. ಅಂತಿಮ ಹಂತದಲ್ಲಿ ಐದನೇ ವಿಕೆಟ್‌ಗೆ ಬೋಥಾ (೧೨) ಹಾಗೂ ಟೇಲರ್ ಅಜೇಯ ೩೫ ರನ್ ಸೇರಿಸಿ ಮೊತ್ತವನ್ನು ೧೬೦ರ ಸನಿಹಕ್ಕೆ ತಂದರು.

ಟೇಲರ್ ತನ್ನ ಅಜೇಯ ಇನ್ನಿಂಗ್ಸ್ ನಲ್ಲಿ ತಲಾ ಎರಡು ಬೌಂಡರಿ ಹಾಗೂ ಸಿಕ್ಸ್ ಸಿಡಿಸಿದ್ದರು.

Advertisements
Posted in: Sports News