ಕಾರ್‌ಸ್ಟ್ರೀಟ್: ಯುವಕ ಆತ್ಮಹತ್ಯೆ

Posted on April 16, 2011

0


ಮಂಗಳೂರು: ನಗರದ ಕಾರ್‌ಸ್ಟ್ರೀಟ್‌ನ ಬಸವನಗುಡಿ ನಿವಾಸಿ ನವೀನ್(೩೩) ಎಂಬ ಯುವಕನೋರ್ವ ನಿನ್ನೆ ರಾತ್ರಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ನಡೆದಿದೆ. ಖಾರ ತಿಂಡಿ ತಯಾರಿಸುವ ಮಾಲಾ ಮಂಜುನಾಥ ಎಂಬವರ ಅಣ್ಣನ ಮಗ ನವೀನ್ ನಿನ್ನೆ ರಾತ್ರಿ ಹತ್ತು ಗಂಟೆ ಸುಮಾರಿಗೆ ಮನೆಯಿಂದ ಹೊರಗೆ ತೆರಳಿದ್ದು ನಂತರ ತಡರಾತ್ರಿಯವರೆಗೂ ಹಿಂತಿರುಗಿರಲಿಲ್ಲ. ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿತ್ತು. ಈ ಬಗ್ಗೆ ಸಂಶಯಗೊಂಡು ಹುಡುಕಾಡಿದಾಗ ಇಂದು ಮುಂಜಾನೆ ತಿಂಡಿ ತಯಾರಿಸುವ ಕೊಠಡಿಯಲ್ಲಿ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆಗೈದಿರುವುದು ಬೆಳಕಿಗೆ ಬಂದಿದೆ. ನವೀನ್ ಅವಿವಾಹಿತನಾಗಿದ್ದು ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಬಂದರ್ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸುತ್ತಿದ್ದಾರೆ.

Advertisements
Posted in: Crime News