ಆಜ್ಞೆಗೆ ಬದ್ದರಾಗಿದ್ದೇವೆ: ಸಂಗಕ್ಕರ

Posted on April 16, 2011

0


ಹೈದರಾಬಾದ್: ಮುಂದಿನ ತಿಂಗಳು ಇಂಗ್ಲೆಂಡ್ ವಿರುದ್ಧ ನಡೆಯ ಲಿರುವ ಸರಣಿಯ ಹಿನ್ನೆಲೆಯಲ್ಲಿ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ತೆಗೆದು ಕೊಂಡಿರುವ ನಿರ್ಧಾರಕ್ಕೆ ನಾನು ಹಾಗೂ ಐಪಿಎಲ್‌ನಲ್ಲಿ ಆಡುತ್ತಿರುವ ತಂಡದ ಎಲ್ಲಾ ಸದಸ್ಯರು ಬದ್ದರಾಗಿ ದ್ದೇವೆ ಎಂದು ಲಂಕಾ ತಂಡದ ಸದಸ್ಯ ಹಾಗೂ ಡೆಕ್ಕನ್ ಚಾರ್ಜರ‍್ಸ್‌ನ ಕಪ್ತಾನ ಕೂಡ ಆಗಿರುವ ಕುಮಾರ ಸಂಗಕ್ಕರ ಸ್ಪಷ್ಟಪಡಿಸಿದ್ದಾರೆ.

ಮೇ ಅಂತ್ಯದಲ್ಲಿ ಆರಂಭವಾಗಲಿ ರುವ ಇಂಗ್ಲೆಂಡ್ ಸರಣಿಯಲ್ಲಿ ನಾವು ಭಾಗವಹಿಸಲೇಬೇಕಿದೆ. ಆದರೆ ನಮಗೆ ನಮಗೆ ಮೇ ಐದರೊಳಗೆ ತಂಡವನ್ನು ಸೇರಬೇಕಿದೆಯೋ ಎಂಬುದರ ಬಗ್ಗೆ ನಿಖರವಾಗಿ ತಿಳಿದಿಲ್ಲ. ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಲಿ) ಈ ಕುರಿತು ಸ್ಪಷ್ಟವಾದ ನಿರ್ಧಾರ ಹೊರಡಿಸಬೇಕಿದೆ ಎಂದು ತಿಳಿಸಿದ ಸಂಗಕ್ಕರ ತನ್ನ ನಿರ್ಗಮನದ ಬಳಿಕ ಯಾರೂ ಕೂಡ ಡೆಕ್ಕನ್ ತಂಡ ವನ್ನು ಮುನ್ನಡೆಸಬಹುದು ಎಂದು ತಿಳಿಸಿದರು. ಐಪಿಎಲ್‌ನಲ್ಲಿ ಆಡುತ್ತಿರುವ ಲಂಕಾ ತಂಡದ ಎಲ್ಲಾ ಸದಸ್ಯರು ಮೇ ಐದರೊಳಗೆ ಸ್ಪದೇಶಕ್ಕೆ ವಾಪಸ್ಸಾ ಗಬೇಕೆಂದು ಎಸ್‌ಎಲ್‌ಸಿ ಈ ಹಿಂದೆ ಆಗ್ರಹಿಸಿತ್ತು. ಆದರೆ ಬೋರ್ಡ್ ನ ಈ ನಿರ್ಧಾರಕ್ಕೆ ಲಂಕಾ ಸ್ಪಿನ್ನರ್ ಮುತ್ತಯ್ಯ ಮುರುಳೀಧರನ್ ಅಸಮ ಧಾನ ವ್ಯಕ್ತಪಡಿಸಿದ್ದಾರೆ.

Advertisements
Posted in: Sports News