ಅನೈತಿಕ ಚಟುವಟಿಕೆಯ ತಾಣವಾದ ಏರ್‌ಪೋರ್ಟ್ ರಸ್ತ ೆ

Posted on April 16, 2011

0


ಮಂಗಳೂರು: ಬಜ್ಪೆ ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಯು ಕಾಡು-ಪೊದೆಗಳಿಂದ ಕೂಡಿರುವ ಕಾರಣ ಈ ಪ್ರದೇಶವು ಕಾಲೇಜು ವಿದ್ಯಾರ್ಥಿಗಳು ಮತ್ತು ಕಾಮಿಗಳ ಪಾಲಿಗೆ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದ್ದು ಸ್ಥಳೀಯರಲ್ಲಿ ಮುಜುಗರಕ್ಕೆ ಕಾರಣವಾಗಿದೆ.

ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆ ಮಧ್ಯೆ ಸಿಗುವ ಮರಕಡ ಬಸ್ ನಿಲ್ದಾಣದ ಬಳಿ ಗುಡ್ಡವೊಂದಿದ್ದು ಇದು ಮರ-ಪೊದೆಗಳಿಂದ ತುಂಬಿದೆ. ಇಲ್ಲಿಗೆ ಪ್ರತೀ ದಿನ ಜೋಡಿ ಹಕ್ಕಿಗಳು ಬಂದು ಹೋಗುತ್ತಿದ್ದರೂ ಇವರ ಬಗ್ಗೆ ಇದುವರೆಗೂ ಯಾರೂ ತಲೆ ಕೆಡಿಸಿಕೊಂಡಂತೆ ಕಂಡು ಬಂದಿಲ್ಲ. ಆದರೆ ಮೊನ್ನೆ ಮಧ್ಯಾಹ್ನ ಈ ದಾರಿಯಾಗಿ ಹೋಗುತ್ತಿದ್ದ ತಮಿಳ್ನಾಡು ಮೂಲದ ಬಡ್ಡಿ ವ್ಯಾಪಾರಿಯೊಬ್ಬರು ಮೂತ್ರ ಶಂಕೆಗಾಗಿ ತಮ್ಮ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಗುಡ್ಡದತ್ತ ಹೆಜ್ಜೆ ಹಾಕಿದ್ದರು.

ಈ ಸಂದರ್ಭ ಅಲ್ಲೇ ಪೊದೆಯ ನಡುವೆ ಮನುಷ್ಯರ ನಲುಗಾಟ ಕೇಳಿಸಿದ್ದು ಬಡ್ಡಿ ವ್ಯಾಪಾರಿ ಸೂಕ್ಷ್ಮವಾಗಿ ನೋಡಿದಾಗ ಜೋಡಿಯೊಂದು ವಿವಸ್ತ್ರರಾಗಿ ರಾಸಲೀಲೆಯಲ್ಲಿ ತೊಡಗಿದ್ದರು ಎನ್ನಲಾಗಿದೆ. ವ್ಯಾಪಾರಿಯನ್ನು ಕಂಡ ಜೋಡಿ ಹೆದರಿ ಹಣ್ಣುಗಾಯಿ-ನೀರುಗಾಯಿಯಾಗಿದ್ದು ಅಸಹ್ಯವನ್ನು ನೋಡಿದ ವ್ಯಾಪಾರಿ ಪಕ್ಕದಲ್ಲಿರುವ ವೈನ್‌ಶಾಪ್‌ನಲ್ಲಿ ವಿಷಯ ತಿಳಿಸಿದ್ದರು.

ಈ ಸಂದರ್ಭ ಅಲ್ಲಿದ್ದ ಜನರು ಜೋಡಿಯ ಸೆರೆಗೆ ಸಿದ್ಧತೆ ನಡೆಸುತ್ತಿದ್ದಂತೆಯೇ ಯುವಕ ತನ್ನ ಗಿಣಿಯನ್ನು ಅಲ್ಲೇ ಬಿಟ್ಟು ತನ್ನ ಬೈಕಿನಲ್ಲಿ ಪರಾರಿಯಾಗಿದ್ದಾನೆ. ಕೆಲ ಹೊತ್ತಿನಲ್ಲಿಯೇ ಬಿಳಿ ಬಣ್ಣದ ಸಮವಸ್ತ್ರ ಧರಿಸಿದ್ದ ಯುವತಿಯೋರ್ವಳೇ ಸ್ಥಳದಿಂದ ನಿರ್ಗಮಿಸಿದ್ದಾಳೆ. ಆಕೆಯನ್ನು ಮಗನಿಸಿದ ಯುವಕರು, ಯುವತಿ ಪ್ರತೀ ದಿನ ಅದೇ ರಸ್ತೆಯಿಂದ ಹೋಗುವವಳಾಗಿದ್ದು ಆಕೆ ಮಂಗಳೂರಿನ ಕಾಲೇಜೊಂದರ ವಿದ್ಯಾರ್ಥಿನಿಯೆಂದು ತಿಳಿಸಿದ್ದರೂ ಆಕೆಯ ಜೊತೆಗಿದ್ದ ಯುವಕನ ಬಗ್ಗೆ ಗುರುತು ಹಿಡಿಯುವಲ್ಲಿ ವಿಫಲರಾಗಿದ್ದಾರೆ. ಪ್ರತಿಷ್ಠಿತ ವಿಮಾನ ನಿಲ್ದಾಣಕ್ಕೆ ತೆರಳುವ ರಸ್ತೆಯ ಪ್ರಮುಖ ಸ್ಥಳವೇ ಜೋಡಿಹಕ್ಕಿಗಳ ಕಲರವದ ತಾಣವಾಗಿದ್ದು ಇದು ಸ್ಥಳೀಯರಲ್ಲಿ ಮುಜುಗರವನ್ನು ತರಿಸಿದೆ. ಅಲ್ಲದೆ ಹೆತ್ತವರೂ ತಮ್ಮ ಹೆಣ್ಮಕ್ಕಳ ಬಗ್ಗೆ ನಿಗಾ ಇಡಬೇಕು ಎನ್ನುವ ಮಾತುಗಳೂ ಕೇಳಿ ಬಂದಿದೆ.

Advertisements