ಸಿಕ್ಕಿಬಿದ್ದ ಪರ್ಸ್ ಕಳ್ಳ: ಸಾರ್ವಜನಿಕರಿಂದ ಗೂ ಸಾ

Posted on April 14, 2011

0


ಮಂಗಳೂರು: ನಗರದ ಬಸ್ ವೊಂದರಲ್ಲಿ ಮಹಿಳೆಯ ಪರ್ಸ್ ಕಿತ್ತು ಕೊಂಡು ಪರಾರಿಯಾಗುತ್ತಿದ್ದ ಯುವಕ ನೋರ್ವನನ್ನು ಸಾರ್ವಜನಿ ಕರೇ ಹಿಡಿದು ಥಳಿಸಿ ಪೊಲೀಸರಿಗೊಪ್ಪಿ ಸಿದದ ಘಟನೆ ನಿನ್ನೆ ಬಲ್ಮಠದಲ್ಲಿ ನಡೆದಿದೆ.

ಆರೋಪಿ ಗುರುವಾಯನಕೆರೆ ಸಮೀಪದ ಪೊಟ್ಟಿಕೆರೆ ಗ್ರಾಮದ ಸಂದೇಶ ತಾನೂ ಬಸ್ ನಿರ್ವಾಹಕ ಎಂದು ಹೇಳಿಕೊಂಡಿದ್ದಾನೆ. ಸ್ಟೇಟ್ ಬ್ಯಾಂಕ್‌ನಿಂದ ಕುಂಪಲಕ್ಕೆ ಹೊರಟಿದ್ದ ಬಸ್ ಬಲ್ಮಠಕ್ಕೆ ಬರುತ್ತಿದ್ದಂತೆಯೇ ಬಸ್‌ನ ಬಾಗಿಲ ಬಳಿ ನಿಂತಿದ್ದ ಯುವಕ ನೊರ್ವ ಮಹಿಳೆಯ ಕೈಯಲ್ಲಿದ್ದ ಪರ್ಸ್‌ನು ಕಿತ್ತುಕೊಂಡು ಪರಾರಿ ಯಾದ ಎನ್ನಲಾಗಿದೆ. ಕೂಡಲೇ ಮಹಿಳೆ ಬೊಬ್ಬಿಟ್ಟಾಗ ಸಾರ್ವಜನಿಕರು ಆತನನ್ನು ಬೆನ್ನಟ್ಟಿ ಹಿಡಿದು ಚೆನ್ನಾಗಿ ಭಾರಿಸಿದ್ದಾರೆ.

ಕದ್ರಿ ಪೊಲೀಸರು ಆರೋಪಿ ಯನ್ನು ವಶಕ್ಕೆ ತೆಗೆದುಕೊಂ ಡಿದ್ದು ಪ್ರಕರಣ ದಾಖಲಿಸಿಕೊಂಡಿ ದ್ದಾರೆ.

Posted in: Crime News