ಮಹಿಳೆಗೆ ವಂಚಿಸಿದ ಉದ್ಯಾವರ ಪಂ. ಸದಸ್ಯ

Posted on April 14, 2011

0


ಉಡುಪಿ: ೧೫ ವರ್ಷಗಳಿಂದ ಪ್ರೀತಿಸಿ ದೇವಸ್ಥಾನವೊಂದರಲ್ಲಿ ಮದುವೆ ಯಾಗಿ ಇದೀಗ ಆಕೆಗೆ ವಂಚಿಸಿ ಬೇರೊಂದು ಯುವತಿಯೊಂದಿಗೆ ನಿಶ್ಚಿತಾ ರ್ಥಗೊಳ್ಳಲಿರುವ ಉದ್ಯಾವರ ಗ್ರಾ.ಪಂ ಸದಸ್ಯನ ವಿರುದ್ಧ ವಂಚನೆಗೊಳಗಾದ ಮಹಿಳೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.

ಕಟಪಾಡಿ ಮಟ್ಟುವಿನ ಗೀತಾ (೪೧) ಎಂಬವರಿಗೆ ಪಿತ್ರೋಡಿ ನಿವಾಸಿ ಉದ್ಯಾವರ ಗ್ರಾ.ಪಂ ಸದಸ್ಯ ಪುಷ್ಪರಾಜ್ ಕೋಟ್ಯಾನ್ (೪೪) ಎಂಬಾತನೊಂದಿಗೆ ಸುಮಾರು ೨೦ ವರ್ಷಗಳಿಂದ ಪರಿಚಯವಿತ್ತು. ೧೫ ವರ್ಷಗಳಿಂದ ಒಬ್ಬರ ನ್ನೊಬ್ಬರು ಪ್ರೀತಿಸಲು ಶುರು ಮಾಡಿದ್ದರು.

ಪುಷ್ಪರಾಜ್ ಬಿಲ್ಲವ ಜಾತಿ ಹಾಗೂ ಗೀತಾ ಮೊಗವೀರ ಜಾತಿಗೆ ಸೇರಿ ದವರಾಗಿರುವುದರಿಂದ ಆತ ಜಾತಿಯ ಕಾರಣವೊಡ್ಡಿ ಈಕೆಯನ್ನು ಮದುವೆಯಾಗಲು ಹಿಂಜರಿಯುತ್ತಿದ್ದ.

ಆದರೆ ಗೀತಾ ಹೇಳುವ ಪ್ರಕಾರ ಅವರಿಬ್ಬರ ಮದುವೆ ಆನೆಗುಡ್ಡೆ ದೇವ ಸ್ಥಾನದಲ್ಲಿ ಈ ಹಿಂದೆ ನಡೆದಿತ್ತು. ಜೊತೆಯಾಗಿ ವಾಸಿಸುತ್ತಿದ್ದ ಈತ ಕೆಲ ತಿಂಗಳಿಂದ ತನ್ನಿಂದ ದೂರವಾಗಿದ್ದು, ಬೇರೆ ಯುವತಿಯೊಂದಿಗೆ ನಿಶ್ಚಿತಾ ರ್ಥವಾಗಿರುವುದಾಗಿ ತಿಳಿದುಬಂದಿದೆ ಎಂದು ಗೀತಾ ದೂರಿ ಕೊಂಡಿದ್ದಾಳೆ.

ಈ ಸಂಬಂಧ ಆತನಲ್ಲಿ ಕೇಳಿದಾಗ ‘ನಿನ್ನಿಂದ ಏನು ಮಾಡಲು ಸಾಧ್ಯವಿದೆ ಅದನ್ನು ಮಾಡು, ನಾನು ಬೇರೆ ಹುಡುಗಿಯನ್ನು ನೋಡಿ ಮದುವೆಯಾಗುತ್ತೇನೆ ಎಂದು ಹೇಳಿ ಬೆದರಿಕೆ ಹಾಕಿದ್ದಾನೆಂದು ದೂರಿ ಕೊಂಡಿದ್ದಾರೆ. ಈ ಸಂಬಂಧ ಯುವತಿ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾಳೆ.

ಮೋಸ ಮಾಡುವ ಉದ್ದೇಶದಿಂದಲೇ ಈತ ವಿಧಿಬದ್ಧವಾಗಿ ಮದುವೆ ಯಾಗದೆ ವಂಚಿಸಿದ್ದಾನೆ. ಅಲ್ಲದೆ ಈಗಾಗಲೇ ರಾಜಕೀಯ, ಹಣ ಮತ್ತು ಜನಬಲದಿಂದ ತನ್ನ ಮೇಲೆ ಹಲ್ಲೆ ನಡೆಸುವ ಸಾಧ್ಯತೆಯಿದೆ,

ಪುಷ್ಪರಾಜ್ ತನಗೆ ವಂಚಿಸುವ ಮೂಲಕ ಇನ್ನೊಂದು ಹುಡುಗಿಗೂ ವಂಚಿಸಲು ನಾನು ಬಿಡುವುದಿಲ್ಲ ಎಂದಿರುವ ಗೀತಾ ಈತನ ಹಿಂದೆ ಈಗಾಗಲೇ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು ತನಗೆ ಸೂಕ್ತ ರಕ್ಷಣೆ ಕೊಟ್ಟು ಆರೋಪಿಯ ಮೇಲೆ ಸೂಕ್ತ ಕ್ರಮ ಜರಗಿಸ ಬೇಕೆಂದು ಪೊಲೀಸ್ ವರಿಷ್ಠಾಧಿಕಾರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.

Posted in: Crime News