ಮಗನನ್ನೇ ಕಡಿದ ಅಪ್ಪ

Posted on April 14, 2011

0


ಕಾರ್ಕಳ: ಹಿರಿಯಡ್ಕದ ಕೊಂಡಾಡಿ ಎಂಬಲ್ಲಿ ಮಗನೊಬ್ಬ ನನ್ನು ಅಪ್ಪ ಕತ್ತಿಯಿಂದ ಕಡಿದು ಗಾಯ ಗೊಳಿಸಿದ ಘಟನೆ ಸಂಭವಿಸಿದೆ.

ಹಿರಿಯಡ್ಕ ಕೊಂಡಾಡಿಯ ಸಂತೋಷ್ ನಾಯಕ್(೨೩) ಎಂಬಾತ ಘಟನೆಯಲ್ಲಿ ಗಾಯಗೊಂಡವನಾಗಿ ದ್ದಾನೆ. ಈತನ ತಂದೆ ಬಾಸ್ಕರ್‌ನಾಯ್ಕ್ ಪ್ರಕರಣದ ಆರೋಪಿಯಾಗಿದ್ದಾರೆ.

ತಂದೆ ಹಾಗೂ ಮಗನಿಗೆ ವಿಪ ರೀತ ಕುಡಿತದ ಚಟವಿತ್ತೆಂದು ತಿಳಿದು ಬಂದಿದೆ. ಮಂಗಳವಾರ ಸಂಜೆ ಸುಮಾರು ೬.೩೦ಕ್ಕೆ ಸಂತೋಷ್ ಮದ್ಯದ ಅಮಲಿನಲ್ಲಿ ಮನೆಗೆ ಬಂದಿ ದ್ದಾಗ ಅಲ್ಲಿದ್ದ ಕುಡುಕ ತಂದೆ ಜಗಳಕ್ಕೆ ಮುಂದಾದರೆಂದು ತಿಳಿದುಬಂದಿದೆ. ಸೋಮಾರಿಯಾಗಿ ತಿರುಗುವ ನೀನು ಮನೆಯ ಖರ್ಚಿಗೆ ಚಿಕ್ಕಾಸು ನೀಡದೇ ಇರುವುದರಿಂದ ಇನ್ನೂ ಮುಂದೆ ಊಟ ಹಾಕುವುದಿಲ್ಲ. ಎಂದು ಹೇಳಿದ ಅಪ್ಪ ನಿಗೆ ಮಗ ಸಂತಷ್ ಎದುರು ಉತ್ತರ ನೀಡಿದನೆನ್ನಲಾಗಿದೆ. ಮಾತಿಗೆ ಮಾತು ಬೆಳೆದಾಗ ಕುಪಿತಗೊಂಡ ತಂದೆ ಅಡುಗೆ ಕೋಣೆಯಲ್ಲಿದ್ದ ಕತ್ತಿಯಿಂದ ಮಗನ ಕೈಯ ಮಣಿಗಂಟು ಕಡಿದು ಗಾಯಗೊಳಿಸಿದ್ದಾರೆ.

Posted in: Crime News