ಬ್ಲೂಫಿಲಂ ನೋಡಿದ ವಿದ್ಯಾ ಬಾಲನ್

Posted on April 14, 2011

0


ಮುಂಬೈ: ಬಾಲಿವುಡ್ ತಾರೆ ವಿದ್ಯಾ ಬಾಲನ್ ಇತ್ತೀಚೆಗೆ ಬ್ಲೂ ಫಿಲಂ (ವಯಸ್ಕರ ಚಿತ್ರ) ನೋಡಿ ವಿಚಿತ್ರ ಅನುಭವ ಪಡೆದಿದ್ದಾರೆ. ಒಬ್ಬರೇ ಕೂತು ಕೊಠಡಿಯಲ್ಲಿ ವಯಸ್ಕರ ಚಿತ್ರ ನೋಡಿದ್ದಾಗಿ ಸುದ್ದಿ. ಬ್ಲೂ ಫಿಲಂ ಸಿಡಿ ಹಾಕಿ ಇನ್ನೇನು ಮೊದಲ ಪ್ರಣಯ ಭರಿತ ದೃಶ್ಯ ಮೂಡಿಬರುತ್ತಿದ್ದಂತೆ ಕಂಪ್ಯೂಟರ್ ಆಫ್ ಮಾಡಿ ಸಾಕಪ್ಪಾ ಸಾಕು ಇದರ ಸಹವಾಸ ಎಂದು ಎದ್ದು ಬಂದಿದ್ದಾರೆ.

ಇಷ್ಟಕ್ಕೂ ವಿದ್ಯಾ ಬಾಲನ್ ಯಾವ ಸಿಡಿ ನೋಡಿದರು ಎಂಬ ಬಗ್ಗೆ ಮಾಹಿತಿ ಇಲ್ಲ. ತಾವು ನೋಡಿದ ವಯಸ್ಕರ ಚಿತ್ರದ ಸಿಡಿ ತೀರಾ ಕೆಟ್ಟದಾಗಿತ್ತು. ಇದನ್ನು ನೋಡಿದ್ದೆ ಸಿಕ್ಕಾಪಟ್ಟೆ ಕಸಿವಿಸಿ ಅನುಭವಿಸುವಂತಾಯಿತು ಎಂದು ಅವರು ಸ್ವಲ್ಪವೂ ನಾಚಿಕೊಳ್ಳದೆ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅಂದಹಾಗೆ ಸಿಲ್ಕ್ ಸ್ಮಿತಾ ಪಾತ್ರಕ್ಕಾಗಿ ವಿದ್ಯಾ ಬಾಲನ್ ಬಹಳಷ್ಟು ಶ್ರಮಿಸುತ್ತಿರುವುದು ಗೊತ್ತೇ ಇದೆ.

ಬಹಳಷ್ಟು ಸೆಕ್ಸ್ ಸೀನ್‌ಗಳಲ್ಲಿ ವಿದ್ಯಾ ಬಾಲನ್ ಅಭಿನಯಿಸಿದ ಕಾರಣ ಆಕೆ ಸೆಕ್ಸಿ ತಾರೆ ಎಂಬ ಪಟ್ಟ ಸಿಕ್ಕಿತ್ತು. ಈ ಹಿಂದೊಮ್ಮೆ ವಿದ್ಯಾಳ ಪಾರದರ್ಶಕ ಬಿಕಿನಿ ಚಿತ್ರ ಪಡ್ಡೆಗಳ ಪಾಲಿಗೆ ಬಿಸಿಬಿಸಿ ಪಡ್ಡು ತರಹ ಕಾಣಿಸಿತ್ತು.ಇತ್ತೀಚೆಗೆ ರಜನಿ ಜೊತೆ ನಟಿಸುವ ಅವಕಾಶವೂ ವಿದ್ಯಾ ಪಾಲಿಗೆ ಬಂದಿತ್ತು. ಬಯಸದೆ ಬಂದ ಭಾಗ್ಯವನ್ನು ವಿದ್ಯಾ ತನ್ನ ಕೈಯಾರೆ ತಿರಸ್ಕರಿಸಿದ್ದರು.

Posted in: National News