ಗಾಂಜಾ ಪತ್ತೆ: ಆರೋಪಿ ಪರಾರಿ

Posted on April 14, 2011

0


ಮಂಗಳೂರು: ಬಿಜೈ ಕೆಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ಮಂಗಳವಾರ ರಾತ್ರಿ ಗಸ್ತಿನಲ್ಲಿದ್ದ ಉರ್ವ ಪೊಲೀಸರು ೧೨೫ ಗ್ರಾಂ. ಗಾಂಜಾ ಹಾಗೂ ಸ್ಕೂಟರ್ ವಶಪಡಿಸಿಕೊಂಡಿದ್ದು ಆದರೆ ಆರೋಪಿಗಳು ಪರಾರಿಯಾಗಿದ್ದಾರೆ.

ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ಬಂದ ಕೆನೆಟಿಕ್ ಸ್ಕೂಟರ್ ನಿಲ್ಲಿಸಿ ವಿಚಾರಿಸಿದಾಗ ಸವಾರರು ತನ್ನ ಹೆಸರು ಪುನಿತ್ ಬಿಕರ್ನಕಟ್ಟೆ ಎಂದಷ್ಟೇ ಹೇಳಿ ಆ ಬಳಿಕ ಪರಾರಿಯಾಗಿದ್ದರು. ಆದರೆ ಕೆನೆಟಿಕ್‌ನ ಸೀಟ್ ಎತ್ತಿ ತಪಾಸಣೆ ನಡೆಸಿದಾಗ ಅಲ್ಲಿ ಐದು ಪ್ಲಾಸ್ಟಿಕ್ ಪ್ಯಾಕೆಟ್‌ನಲ್ಲಿ ೧೨೫ ಗ್ರಾಂ. ಗಾಂಜಾ ಸಿಕ್ಕಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಸ್ಕೂಟರ್ ಸಹಿತ ವಶಪಡಿಸಲಾದ ಒಟ್ಟು ಸೊತ್ತುಗಳು ಮೌಲ್ಯ ಸುಮಾರು ೩೬ ಸಾವಿರ ಎಂದು ಅಂದಾಜಿಲಾಗಿದೆ.

Posted in: Crime News