ಕಾಟಿಪಳ್ಳ ಮಸೀದಿ ವಿವಾದ: ಖತೀಬ್‌ನಿಂದ ಹಲ್ಲೆ ದ ೂರು

Posted on April 14, 2011

0


ಮಂಗಳೂರು: ಮಸೀದಿಯ ಖತೀಬ್ ಮತ್ತು ಇತರರು ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ವ್ಯಕ್ತಿಯೋರ್ವರು ಠಾಣೆಗೆ ದೂರು ನೀಡುವ ಮೂಲಕ ಕಾಟಿಪಳ್ಳ ಮಸೀದಿ ವಿವಾದ ಸದ್ಯಕ್ಕೆ ಬಗೆಹರಿಯುವ ಲಕ್ಷಣಗಳು ಗೋಚರಿ ಸುತ್ತಿಲ್ಲ.

ಇಲ್ಲಿನ ಎರಡನೇ ಬ್ಲಾಕ್ ಪಣಂ ಬೂರು ಜಮಾತ್‌ಗೆ ಒಳಪಟ್ಟ ಮಸೀದಿ ಯಲ್ಲಿ ಅವ್ಯವಹಾರ ನಡೆದಿದೆ ಎಂದು ಎದುರಾಳಿಗಳು ತಕರಾರು ಎತ್ತಿದ್ದ ಕಾರಣ ಕೆಲವು ದಿನಗಳ ಹಿಂದೆ ವಿವಾದ ತಾರಕ ಕ್ಕೇರಿತ್ತು. ಇದರ ಹಿನ್ನೆಯಲ್ಲಿ ಮೊನ್ನೆ ತನಿಖಾಧಿಕಾರಿಯಾಗಿ ಮಿರ್ಜಾ ಅಕ್ಬ ರುಲ್ಲಾ ಅವರು ಮಸೀದಿಗೆ ಭೇಟಿ ನೀಡಿ ದ್ದರು. ಈ ಸಂದರ್ಭದಲ್ಲಿ ಅವರ ಎದುರೇ ಖತೀಬ್ ಮತ್ತಿತರರಿಗೆ ಹಲ್ಲೆ ನಡೆಸಲಾಗಿತ್ತು.

ಇದೇ ಪ್ರಕರಣದ ಮುಂದುವರಿದ ಭಾಗವಾಗಿ ನಿನ್ನೆ ಖತೀಬರಾದ ಶರೀಫ್ ಬಕಾವಿ ಯಾನೆ ಚಿಟ್‌ಫಂಡ್ ಖತೀಬ್, ಸಲೀಂ, ರಫೀಕ್ ಯಾನೆ ಸೆಲಿ, ಆಸಿಫ್, ಅಬೂಬಕ್ಕರ್ ಯಾನೆ ಅಬ್ಬು ಹುಸೈನ್ ಬಾವ ಯಾನೆ ರೆಡೆಕ್ ಬಾವ ಎಂಬವರು ಮಸೀದಿ ಬಳಿ ಹಲ್ಲೆ ನಡೆಸಿರುವುದಾಗಿ ಸಿರಾಜ್ ಎಂಬವರು ಸುರತ್ಕಲ್ ಠಾಣೆಗೆ ದೂರು ನೀಡಿದ್ದಾರೆ.

Posted in: Crime News