ಹಿಟ್ ಆಂಡ್ ರನ್: ಬೈಕ್ ಸವಾರರ ದಾರುಣ ಸಾವು

Posted on April 14, 2011

0


ಮಂಗಳೂರು: ಕೂಳೂರಿನ ಅಯ್ಯಪ್ಪ ಮಂದಿರ ಸಮೀಪ ಬೈಕ್ ಸವಾರರಿಬ್ಬರನ್ನು ಘನ ವಾಹನವೊಂದು ನಿನ್ನೆ ತಡರಾತ್ರಿ ಅಪಘಾತ ನಡೆಸಿ ಪರಾರಿಯಾಗಿದ್ದು, ವಾಹ ನದ ಗುರುತು ಪತ್ತೆಯಾಗಿಲ್ಲ. ಅಪರಿಚಿತ ವಾಹನದಡಿಗೆ ಬಿದ್ದ ಬೈಕ್ ಸವಾರರನ್ನು ಉತ್ತರ ಕರ್ನಾಟಕ ಮೂಲದ ಬಸವರಾಜ್ ಹಾಗೂ ಶರಣಪ್ಪ ಕೊಪ್ಪಳ ಎಂದು ಗುರುತಿಸಲಾಗಿದೆ.

ಕೋಡಿಕಲ್‌ನಲ್ಲಿ ವಾಸವಾಗಿರುವ ಇವರಿ ಬ್ಬರು ತನ್ನ ಗೆಳೆಯನ ಬೈಕ್‌ನಲ್ಲಿ ಒಂದು ರೌಂಡ್ ಸುತ್ತಾಟ ನಡೆಸಲೆಂದು ಕೂಳೂರಿಗೆ ಬಂದಿ ದ್ದರು. ಇದೇ ಸಂದರ್ಭದಲ್ಲಿ ಅಯ್ಯಪ್ಪ ಮಂದಿರದ ಬಳಿ ವಾಹನವೊಂದು ಬಂದು ಬೈಕ್‌ಗೆ ಗುದ್ದಿ ಪರಾರಿಯಾಗಿರಬೇಕೆಂದು ಶಂಕಿಸಲಾಗಿದೆ.

ಇಲ್ಲಿ ಹೆದ್ದಾರಿ ಪಕ್ಕದಲ್ಲೇ ರಾತ್ರಿ ಹೊತ್ತು ಗೂಡಂಗಡಿ ಕಾರ‍್ಯಾಚರಿಸುತ್ತಿದ್ದು ಇಲ್ಲಿ ಚಹಾ ಕುಡಿಯಲೆಂದು ಬರುವ ವಾಹನದವರು ರಸ್ತೆಯ ಮಧ್ಯದಲ್ಲೇ ವಾಹನ ನಿಲ್ಲಿಸಿ ಅಪಘಾತಕ್ಕೆ ಕಾರಣರಾಗುತ್ತಿದ್ದಾರೆ. ಇಲ್ಲಿಂದಲೇ ಪೊಲೀಸ್ ಪೆಟ್ರೋಲಿಂಗ್ ವಾಹನ ಸಂಚರಿಸುತ್ತಿದ್ದರೂ ಪೊಲೀಸರು ಇದರ ಬಗ್ಗೆ ತಲೆಕೆಡಿಸಿಕೊಳ್ಳದೆ ಮುಂದೆ ಸಾಗುತ್ತಿದ್ದಾರೆ. ನಿನ್ನೆಯ ಅಪಘಾತಕ್ಕೂ ಇದೇ ಗೂಡಂಗಡಿ ಎದುರು ಅಡ್ಡಾದಿಡ್ಡಿ ನಿಲ್ಲಿಸುವ ವಾಹನಗಳೇ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಹಗಲಿನಲ್ಲೂ ಇಲ್ಲಿ ಸಣ್ಣಪುಟ್ಟ ಗೂಡಂಗಡಿ ರಸ್ತೆ ಬದಿಯೇ ಬಂದು ವ್ಯಾಪಾರ ಆರಂಭಿಸುವುದರಿಂದ ಪ್ರಯಾಣಿಕರು ಜೀವ ಕೈಯ್ಯಲ್ಲಿ ಹಿಡಿದುಕೊಂಡೇ ನಿಲ್ಲುವಂತಾಗಿದೆ. ಇದರ ಮುಂದೆಯೇ ಪೊಲೀಸ್ ಔಟ್‌ಪೋಸ್ಟಿದ್ದರೂ ಇದು ಅಯ್ಯಪ್ಪ ಗುಡಿಯ ಗೋಡೌನ್ ಆಗಿ ಬಿಟ್ಟಿದೆ ಎಂಬ ಆರೋಪ ಸ್ಥಳೀಯರಿಂದ ಕೇಳಿ ಬಂದಿದೆ.

ಅಪಾಯಕಾರಿ ಅಯ್ಯಪ್ಪ ಮಂದಿರ!

ಕೂಳೂರು ಜಂಕ್ಷನ್ ಸಮೀಪ ಇರುವ ಅಯ್ಯಪ್ಪ ಮಂದಿರದಿಂದಾಗಿ ಅಲ್ಲಿ ರಸ್ತೆಯೂ ಇಕ್ಕಟ್ಟಿನಲ್ಲಿದೆ. ಹಗಲಿನಲ್ಲೂ ಇಲ್ಲಿ ರಸ್ತೆ ಬ್ಲಾಕ್ ಆಗಿ ಪ್ರಯಾ ಣಿಕರು ತೊಂದರೆಗೆ ಒಳಗಾಗುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಯನ್ನು ಆಕ್ರಮಿಸಿಕೊಂಡು ಅಕ್ರಮವಾಗಿ ಕಟ್ಟಿರುವ ಅಯ್ಯಪ್ಪನ ಗುಡಿಯನ್ನು ಇಲ್ಲಿಂದ ತೆರವುಗೊಳಿಸಬೇಕೆಂಬ ಆಗ್ರಹ ಕೇಳಿ ಬಂದರೂ ರಾಜಕೀಯದ ಕಾರಣದಿಂದ ಮಂದಿರ ಇಲ್ಲೇ ನೆಲೆಯಾಗಿತ್ತು. ಇದೇ ಕಾರಣದಿಂದ ಇಲ್ಲಿ ವಾಹನಗಳ ದಟ್ಟಣೆ ಹೆಚ್ಚಿ ಅಪಘಾತಕ್ಕೆ ಆಹ್ವಾನ ನೀಡುತ್ತಿದೆ.

Advertisements
Posted in: Crime News