ಸ್ವದೇಶಕ್ಕೆ ಮರಳಲಿರುವ ಜುಲ್ಕರ್‌ನೈನ್

Posted on April 14, 2011

0


ಮುಂಬಯಿ: ಆಗಂತುಕ ವ್ಯಕ್ತಿಗ ಳಿಂದ ಬೆದರಿಕೆ ಸಂದೇಶ ಬಂದ ಹಿನ್ನೆಲೆಯಲ್ಲಿ ದುಬೈನಲ್ಲಿ ನಡೆಯುತ್ತಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಸಂದರ್ಭ ಪಾಕಿಸ್ತಾನ ತಂಡವನ್ನು ಅರ್ಧದಿಂದಲೇ ಬಿಟ್ಟು ಹೋಗಿ ಇಂಗ್ಲೆಂಡ್‌ನಲ್ಲಿ ನೆಲೆಸಿದ್ದ ವಿವಾದಾತ್ಮಕ ವಿಕೆಟ್ ಕೀಪರ್ ಜುಲ್ಕರ್‌ನೈನ್ ಹೈದರ್ ಶೀಘ್ರದಲ್ಲಿಯೇ ತನ್ನ ತವರು ಪಾಕ್‌ಗೆ ವಾಪಾಸ್ಸಾ ಗಲಿದ್ದಾರೆಂದು ಸಹೋದರ ಅಖೀಲ್ ಹೈದರ್ ತಿಳಿಸಿದ್ದಾರೆ.

ಕೊನೆ ವಾರದಲ್ಲಿ ನನ್ನ ಸಹೋದರ ಪಾಕ್ ಆಂತರಿಕ ವ್ಯವಹಾರಗಳ ಸಚಿವ ರೆಹ್ಮಾನ್ ಮಲಿಕ್‌ರನ್ನು ಅವರ ಲಂಡನ್ ನಿವಾಸದಲ್ಲಿ ಭೇಟಿಯಾಗಿ ಆತನಿಗೆ ಹಾಗೂ ಕುಟುಂಬದ ಎಲ್ಲಾ ಸದಸ್ಯರಿಗೆ ಸೂಕ್ತ ಭದ್ರತೆಯನ್ನು ನೀಡಬೇಕೆಂದು ಕೇಳಿಕೊಂಡಿದ್ದು ಇದಕ್ಕೆ ಮಲಿಕ್ ಸಕ ರಾತ್ಮಕವಾಗಿ ಸ್ಪಂದಿಸಿದ ಹಿನ್ನೆಲೆಯಲ್ಲಿ ಪಾಕ್‌ಗೆ ಮರಳುವ ಇಚ್ಚೆ ವ್ಯಕ್ತಪಡಿಸಿ ದ್ದಾರೆ ಎಂದು ಸಹೋದರ ಅಖೀಲ್ ಸ್ಪಷ್ಟಪಡಿಸಿದ್ದಾರೆ. ಕ್ರಿಕೆಟ್‌ಗೆ ಮತ್ತೇ ಹಿಂತಿರುಬೇಕೆಂದು ಜುಲ್ಕರ್‌ನೈನ್‌ರನ್ನು ಮಲಿಕ್ ವಿನಂತಿ ಮಾಡಿದ್ದಾರೆ ಎಂದು ಹೇಳಲಾಗಿದೆ.

Advertisements
Posted in: Sports News