ಸೀಝರ್ ಗೂಂಡಾಗಿರಿ: ಬಿಡಿಸಲು ಬಂದವನಿಗೆ ತದುಕಿದ ರು!

Posted on April 14, 2011

0


ಮಂಗಳೂರು: ದ್ವಿಚಕ್ರ ವಾಹನಕ್ಕೆ ಸಾಲ ಪಡೆದು ಎರಡು ಕಂತುಗಳನ್ನು ಬಾಕಿಯಿಟ್ಟರೆಂಬ ನೆಪ ಹೇಳಿದ ಬಜಾಜ್ ಫೈನಾನ್ಸ್ ಗೂಂಡಾಗಳು ಬೈಕ್ ಮಾಲಕನಿಗೆ ಸಾರ್ವಜನಿಕ ಸ್ಥಳದಲ್ಲಿ ಹಲ್ಲೆ ಮಾಡಿದ್ದು, ಅದನ್ನು ಪ್ರಶ್ನಿಸಿದ ವ್ಯಕ್ತಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಕಂಕನಾಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೆ.ಸಿ.ರೋಡ್ ನಿವಾಸಿ ಮಹ ಮ್ಮದ್ ಹನೀಫ್ ಎಂಬವರು ವರ್ಷದ ಹಿಂದೆ ಬಜಾಜ್ ಫೈನಾನ್ಸ್‌ನಿಂದ ಸಾಲ ಪಡೆದು ಪಲ್ಸರ್ ಬೈಕ್ ಖರೀದಿಸಿದ್ದರು. ಪ್ರತೀ ತಿಂಗಳಿಗೆ ರೂ.೫,೦೮೦ರಂತೆ ಹಣ ಕಟ್ಟುತ್ತಾ ಬಂದಿದ್ದು ಇದರ ನಡುವೆ ಎರಡು ತಿಂಗಳ ಕಂತು ಬಾಕಿಯಾಗಿತ್ತು ಎನ್ನಲಾಗಿದೆ. ನಿನ್ನೆ ಮಧ್ಯಾಹ್ನದ ವೇಳೆ ಹನೀಫ್ ಜಪ್ಪಿನಮೊಗರಿನಲ್ಲಿರುವ ಕಾರು ಗಳ ಡಿಸೈನ್ ಮಾಡುವ ಅಂಗಡಿಗೆ ಬಂದಿದ್ದರು.

ಅದೇ ವೇಳೆ ಅಲ್ಲಿಗೆ ಬಂದ ಫೈನಾನ್ಸ್‌ನ ಸೀಝರ್‌ಗಳಾದ ಮುಕೇಶ್ ಮತ್ತು ದಿವೇಶ್ ಎಂಬವರು ಅಂಗಡಿಗೆ ಬಂದು ಕಂತು ಬಾಕಿಯಿರುವ ಬಗ್ಗೆ ತಕರಾರು ಎತ್ತಿದ್ದಾರೆ ಎನ್ನಲಾಗಿದ್ದು.ಈ ಸಂದರ್ಭ ತನಗೆ ಫೈನಾನ್ಸ್ ಮೆನೆಜರ್ ಅವರ ಪರಿಚಯ ಇದೆ. ಅವರ ಬಳಿ ಮಾತನಾಡಿ ಬಾಕಿಯಿರುವ ಕಂತು ಕಟ್ಟುತ್ತೇನೆ ಎಂದು ಹನೀಫ್ ಹೇಳಿದ್ದರು. ಆದರೆ ಅದನ್ನು ಕೇಳದ ಸೀಝರ್‌ಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ದೂಡಿ ಹಾಕಿ ಬೈಕನ್ನು ಹೊತ್ತೊಯ್ಯಲು ಮುಂದಾಗಿದ್ದರು. ಇದೇ ವೇಳೆ ಸೀಝ ರ್‌ಗಳ ವರ್ತನೆಯನ್ನು ಗಮನಿಸಿದ ಅಂಗಡಿ ಮಾಲಕ ಉಮ್ಮರ್ ಫಾರೂಕ್ ಸೀಝರ್‌ಗಳ ಬಳಿ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ಇದೇ ವೇಳೆ ಸೀಝರ್‌ಗಳು ಮೊಬೈಲ್ ಮೂಲಕ ಕರೆ ಮಾಡಿದಾಗ ಸುಮಾರು ೧೨ ಮಂದಿ ಬಂದಿದ್ದು ಅವರೆಲ್ಲರೂ ಸೇರಿ ದೊಣ್ಣೆ ಮತ್ತು ಕೈಯಿಂದ ಫಾರೂಕ್ ಅವರಿಗೆ ಹಿಗ್ಗಾ-ಮುಗ್ಗ ಹಲ್ಲೆ ನಡೆಸಿದ್ದಾರೆ ಎಂದು ಅವರ ಸ್ನೇಹಿತರು ಪತ್ರಿಕೆಗೆ ತಿಳಿಸಿದ್ದಾರೆ. ಹಲ್ಲೆಯಿಂದಾಗಿ ಗಂಭೀರವಾಗಿ ಗಾಯಗೊಂಡಿರುವ ಫಾರೂಕ್ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ. ಕಂಕನಾಡಿ ಠಾಣೆ ಯಲ್ಲಿ ಕೇಸು ದಾಖಲಿಸಲಾಗಿದೆ.

ಇದು ಪ್ರಥಮವಲ್ಲ

ವಾಹನ ಖರೀದಿಗೆ ಕಡಿಮೆ ಬಡ್ಡಿಯಲ್ಲಿ ಸುದೀರ್ಘ ಅವಧಿಗೆ ಸಾಲ ನೀಡುತ್ತೇವೆ ಎಂದು ಬೋಂಗು ಬಿಡುವ ಫೈನಾನ್ಸ್‌ಗಳಿಗೆ ವಾಹನ ಖರೀದಿಸುವವರು ಬೋಲ್ಡ್ ಆಗು ವುದು ಸರ್ವೇ ಸಾಮಾನ್ಯವಾಗಿದೆ. ಆದರೆ ಸಾಲ ಪಡೆದ ಬಳಿಕ ಹಿಗ್ಗಾ-ಮುಗ್ಗ ಬಡ್ಡಿ ಹಾಕಿದ ಬಳಿಕವೇ ಫೈನಾನ್ಸ್‌ಗಳ ಅಸಲಿ ಬಣ್ಣ ಬಯಲು ಗೊಳ್ಳುತ್ತದೆ. ಅನಿವಾರ‍್ಯ ಸಂದ ರ್ಭದಲ್ಲಿ ಒಂದೆರಡು ಕಂತುಗಳನ್ನು ಬಾಕಿಯಿಟ್ಟರೆ ಸಾಲ ಗಾರರಿಗೆ ಮನ ಬಂದಂತೆ ಹಲ್ಲೆ ನಡೆ ಸುವುದು, ಸಾರ್ವಜನಿಕ ಸ್ಥಳದಲ್ಲಿ ಅವ ಮಾನಿಸುವುದು ಮಾಮೂಲಿಯಾಗಿ ಬಿಟ್ಟಿದ್ದು ಇದರ ಬಗ್ಗೆ ಪೊಲೀಸ್ ಇಲಾಖೆ ಗಂಭೀರವಾದ ಕ್ರಮ ಕೈಗೊ ಳ್ಳುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಕೆಲವು ತಿಂಗಳ ಹಿಂದೆ ಇದೇ ಅವರ ಮೈದುನನಿಗೆ ವಾಹನದಿಂದ ಎಳೆದು ಹಾಕಿ ಹಲ್ಲೆ ನಡೆಸಿದ ಘಟನೆಯೂ ನಡೆದಿತ್ತು. ಈಗ ಮತ್ತೊಮ್ಮೆ ಅಂತಹದ್ದೇ ಘಟನೆ ನಡೆದಿದೆ. ಮಂಗಳೂರಿನಲ್ಲಿರುವ ಯಾವ ಫೈನಾನ್ಸ್‌ನವರೂ ಸಾಲಗಾರರ ಜೊತೆ ಈ ರೀತಿಯಾಗಿ ಅಮಾನ ವೀಯತೆಯಿಂದ ವರ್ತಿಸ ದಿದ್ದರೂ ಬಜಾಜ್ ಫೈನಾನ್ಸ್ ಸೀಝರ್‌ಗಳ ವರ್ತನೆ ಮಾತ್ರ ಮಿತಿಮೀರಿದ್ದಾಗಿದ್ದು ಅದಕ್ಕೆ ಆಡಳಿತಗಾರರ ಕುಮ್ಮಕ್ಕು ಇದ್ದು ಇದರ ಬಗ್ಗೆ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯವೂ ಕೇಳಿ ಬಂದಿದೆ.

Advertisements
Posted in: Crime News