ವಿದ್ಯುತ್ ಎಕ್ಸ್‌ಪ್ರೆಸ್ ಲೈನ್ ಅಪಾಯದ ಕರೆಗಂಟೆ

Posted on April 14, 2011

0


ಉಪ್ಪಿನಂಗಡಿ: ಇಲ್ಲಿನ ಇಳಂತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಪ್ಪಿನಂಗಡಿ ಗುರುವಾಯನಕೆರೆ ರಸ್ತೆ ನಡುವೆ ವಿಧ್ಯುತ್ ಕಂಬವೊಂದು ರಸ್ತೆಗೆ ವಾಲಿಕೊಂಡಿದ್ದು ಅಪಾಯದ ಕರೆಗಂಟೆ ಬಾರಿಸುತ್ತಿದೆ. ವಿದ್ಯುತ್ ಗುತ್ತಿಗೆ ಪಡೆ ದುಕೊಂಡ ಗುತ್ತಿಗೆದಾರನ ನಿರ್ಲಕ್ಷಕ್ಕೆ ಸಾಕ್ಷಿಯೆಂಬತೆ ಈ ಕಂಬ ವಾಲಿಕೊಂ ಡಿದೆ. ಈ ರಸ್ತೆಯ ತಿರುವಿನಲ್ಲಿ ವಿದ್ಯುತ್ ಲೈನೊಂದಿದ್ದು ಇದು ಕಲ್ಲೇರಿಯ ಸಬ್ ಸ್ಟೇಷನ್‌ನಿಂದ ಉಪ್ಪಿನಂಗಡಿಗೆ ಸೇರ ಲ್ಪಡುತ್ತದೆ.

ಮೆಸ್ಕಾಂ ಇಲಾಖೆಯು ಮಾಡಿದ ಯೋಜನೆಯಂತೆ ಲೈನ್ ಹಾದು ಹೋಗಿಲ್ಲ ಎಂಬ ಆರೋಪ ವ್ಯಕ್ತವಾ ಗಿದ್ದು ಎಲ್ಲಾ ಕಂಬಗಳು ರಸ್ತೆಯುದ್ದಕ್ಕೂ ವಾಲಿಕೊಂಡಿದೆ. ದಿನಂಪ್ರತಿ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸು ತ್ತಿದ್ದು ಈ ವಿದ್ಯುತ್ ಕಂಬದಿಂದಾಗಿ ಸಾವುನೋವು ಉಚಿತವೆಂದು ಸ್ಥಳೀ ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೆಸ್ಕ್ಕಾಂ ಇಲಾಖೆ ಅಧಿಕಾರಿಗಳು ಗುತ್ತಿಗೆದಾರನಿಗೆ ಹಣ ಮಂಜೂರತಿ ಮಾಡಿ ಇದೀಗ ಸಮಸ್ಯೆ ಅನು ಭವಿಸುತ್ತಿದ್ದರೆ ಎಂದರೆ ತಪ್ಪಲ್ಲ.

Advertisements