ವರದಕ್ಷಿಣೆ ಹಿಂಸೆ: ದೂರು

Posted on April 14, 2011

0


ಕುಂದಾಪುರ: ಮದುವೆಯಾಗಿ ಮೂರು ಮಕ್ಕಳಿದ್ದರೂ ಹೆಚ್ಚಿನ ವರದಕ್ಷಿಣೆ ತರಲು ಮಾನಸಿಕ ಹಾಗೂ ದೈಹಿಕವಾಗಿ ಹಿಂಸಿಸಿದ ಪತಿಯ ವಿರುದ್ಧ ಪತ್ನಿ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕುಂದಾಪುರ ಗುಜ್ಜಾಡಿಯ ಸಿಂಧು(೨೬) ಎಂಬವರಿಗೆ ೧೦-೧೧-೨೦೦೩ ರಂದು ಉಪ್ಪುಂದದ ಮಂಜುನಾಥ ಎಂಬಾತನೊಂದಿಗೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ವಿವಾಹವಾಗಿತ್ತು. ಮದುವೆ ಸಮಯದಲ್ಲಿ ವರದಕ್ಷಿಣೆಯಾಗಿ ೨೫ ಸಾವಿರ ನಗದು ಹಾಗೂ ಐದು ಪವನ್ ಚಿನ್ನವನ್ನು ನೀಡಲಾಗಿತ್ತು. ಮದುವೆ ಬಳಿಕ ದಿನಾ ಕುಡಿದು ಬಂದು ಮಂಜುನಾಥ ಹಿಂಸಿಸುತ್ತಿದ್ದನು. ದಂಪತಿಗೆ ಮೂವರು ಮಕ್ಕಳಿದ್ದು, ಇದೀಗ ಮದುವೆ ಸಂದರ್ಭದಲ್ಲಿ ಕೊಟ್ಟಿರುವಂತಹ ವರದಕ್ಷಿಣೆ ಸಾಕಾಗಲಿಲ್ಲವೆಂದು ಮತ್ತಷ್ಟು ತರಲು ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದಾನೆಂದು ಸಿಂಧು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisements
Posted in: Crime News