ಮುಸ್ಲಿಮರ ಮನೆಗೇ ಕನ್ನ ಹಾಕುತ್ತಿದ್ದ ‘ಇತ್ತೆ ಬ ರ್ಪೆ ಅಬೂಬಕರ್

Posted on April 14, 2011

0


ವಿಟ್ಲ: ಹಲವಾರು ಕಳವು ಪ್ರಕರ ಣಗಳಲ್ಲಿ ಭಾಗಿಯಾಗಿ ಇದೀಗ ಬಂಟ್ವಾಳ ವೃತ್ತ ನಿರೀಕ್ಷಕರ ಕಸ್ಟಡಿ ಯಲ್ಲಿರುವ ಕುಖ್ಯಾತ ಕಳ್ಳ ಇತ್ತೆ ಬರ್ಪೆ ಅಬೂಬಕರ್ ಕಳವು ನಡೆಸಿ ರುವುದೆಲ್ಲಾ ಮುಸ್ಲಿಮರ ಮನೆಗಳೆಂದು ಬಹಿರಂಗಪಡಿಸಿದ್ದಾನೆ.

ಕಳವು ನಡೆಸುವ ವೇಳೆ ತುಳಸಿ ಕಟ್ಟೆಯಿರುವ ಮನೆಗಳನ್ನು ಆಯ್ಕೆ ಮಾಡದೇ ಮುಸ್ಲಿಂ ಮನೆಗಳಿಗೆ ಮಾತ್ರ ನುಗ್ಗುತ್ತಿದ್ದನೆನ್ನಲಾಗಿದೆ. ಕಾರಣ ಮುಸ್ಲಿಂ ಮನೆಗಳಲ್ಲಿ ಹೆಚ್ಚಾಗಿ ಮಾಲೀ ಕರು ವಿದೇಶದಲ್ಲಿರುತ್ತಾರೆ ಹಾಗೂ ಉಪವಾಸ ಸಮಯದಲ್ಲಿ ಮಸೀದಿ ಯಲ್ಲಿ ರಾತ್ರಿ ಹೊತ್ತು ಇರುತ್ತಾರೆ. ಹೀಗೆ ಕಳ್ಳತನಕ್ಕೆ ಸುಲಭವಾಗುತ್ತದೆ ಎಂದು ತಿಳಿಸಿದ್ದಾನೆ.

ಬಾಲ್ಯದಿಂದಲೇ ಕಳ್ಳತನವನ್ನು ಪ್ರವೃತ್ತಿಯಾಗಿಸಿಕೊಂಡು ಬಂದಿದ್ದ ಈತ ಕೆಲ ಸಮಯ ಸುರತ್ಕಲ್‌ನಲ್ಲಿ ಮೀನು ಮಾರಾಟ ಮಾಡುತ್ತಿದ್ದ. ಇದರಲ್ಲಿ ಹೆಚ್ಚು ಲಾಭ ಸಿಗಲಿಲ್ಲವೆಂಬ ಕಾರಣಕ್ಕೆ ಗುಜಿರಿ ಅಂಗಡಿ ವ್ಯವಹಾರದೊಂದಿಗೆ ಕಳ್ಳತನ ನಡೆಸಲು ಪ್ರಾರಂಭಿಸಿದ್ದ. ನಂತರ ಕನ್ಯಾನಕ್ಕೆ ವಲಸೆಯಿಟ್ಟ ಈತ ಮೊದಲ ಪತ್ನಿಯನ್ನು ತೊರೆದು ಕನ್ಯಾನದ ಯುವತಿಯನ್ನು ಮದುವೆಯಾಗಿ ಅಲ್ಲಿನ ನೂರಕ್ಕೂ ಅಧಿಕ ಮುಸ್ಲಿಂ ಮನೆಗಳಿಗೆ ಕನ್ನ ಹಾಕಿ ಲಕ್ಷಾಂತರ ಬೆಲೆಬಾಳುವ ಚಿನ್ನಾಭರಣಗಳನ್ನು ದೋಚಿದ್ದ. ವ್ಯಾಪ್ತಿಯನ್ನು ಬೆಳ್ತಂಗಡಿ, ಪುಂಜಾಲಕಟ್ಟೆ, ಮೂಡಬಿದ್ರೆವರೆಗೆ ವಿಸ್ತರಿಸಿದ್ದ. ೧೫೦ ಕ್ಕಿಂತಲೂ ಹೆಚ್ಚಿನ ಪ್ರಕರಣಕ್ಕೆ ಸಂಬಂಧಿಸಿ ಕುಖ್ಯಾತ ಕಳ್ಳ ದಿವಂಗತ ರಿಪ್ಪನ್ ಚಂದ್ರನ್ ಎಂಬಾ ತನೊಂದಿಗೆ ಸೇರಿಕೊಂಡು ಭೂಗತ ನಾಗಿದ್ದ ಇತ್ತೆ ಬರ್ಪೆ ಅಬೂ ಬಕರ್ ನನ್ನು ಸುರತ್ಕಲ್ ಪೊಲೀಸರು ಬಂಧಿ ಸಿದ್ದರು.

ಜಾಮೀನಿನ ಮೇಲೆ ಬಿಡುಗಡೆ ಗೊಂಡ ಬಳಿಕ ಮತ್ತೆ ಕಳವು ಶುರು ಹಚ್ಚಿಕೊಂಡು ಚಿಕ್ಕಮಗಳೂರಿನಲ್ಲಿ ಮೂರನೇ ವಿವಾಹವಾಗಿ ಐಷಾರಾಮಿ ಬಂಗಲೆಯೊಂದನ್ನು ಕಟ್ಟಿ ಜೀವನ ನಿರ್ವಹಿಸುತ್ತಿದ್ದ.

ಬಳಿಕ ನಡೆದ ಕಳವುಗಳಿಗೆ ಮೂರನೇ ಪತ್ನಿ ಸಾಥ್ ನೀಡುತ್ತಿದ್ದಳು. ಇದೀಗ ವಿಟ್ಲದಲ್ಲಿ ಹಲವು ಪ್ರಕರಣ ಗಳಲ್ಲಿ ತಪ್ಪೊಪ್ಪಿಕೊಂಡು ಸೆರೆವಾಸ ಅನುಭವಿಸುತ್ತಿದ್ದಾನೆ.

Advertisements