ಮಗನನ್ನು ಹುಡುಕಿಕೊಡಿ: ಪೊಲೀಸರ ಮೊರೆ ಹೋದ ಹೆತ್ತ ವರು

Posted on April 14, 2011

0


ಮಂಗಳೂರು: ಆರು ವರ್ಷಗಳ ಹಿಂದೆ ಬೆಂಗಳೂರಿಗೆ ಕೆಲಸಕ್ಕೆಂದು ಹೋದ ಮಗ ಮನೆಗೆ ವಾಪಸಾಗಿಲ್ಲ. ಅವನನ್ನು ಹುಡುಕಿಕೊಡಿ ಹೀಗೆಂದು ನೆಲ್ಯಾಡಿ ಸಮೀಪದ ಕೋಣಾಜೆಯ ಪೋಡಿಯ ರಾಮಕ್ಕ ಎಂಬ ವೃದ್ದ ದಂಪತಿ ಉಪ್ಪಿನಂಗಡಿ ಪೊಲೀಸರನ್ನು ಕೇಳಿಕೊಂಡಿದ್ದಾರೆ.

ಏಕೈಕ ಪುತ್ರನಾಗಿರುವ ಬಾಲಸುಬ್ರ ಹ್ಮಣ್ಯ ಆರು ವರ್ಷದಿಂದ ನಾಪತ್ತೆಯಾ ಗಿದ್ದು, ಹೆಚ್ಚಿನ ಹಣ ಸಂಪಾದನೆಯ ಹಂಬಲದಿಂದ ಬೆಂಗಳೂರಿಗೆ ಹೊರ ಟಿದ್ದ. ತಾನು ಸಿನಿಮಾದಲ್ಲಿ ಅವಕಾಶ ಪಡೆದುಕೊಂಡಿದ್ದೇನೆ ಎಂದು ಹೇಳಿ ಹಲವು ನಟ-ನಟಿಯವರ ಜತೆಗಿನ ಫೋಟೊವನ್ನು ಮನೆಯವರಿಗೆ ತೋರಿಸಿದ್ದ. ಹುಡುಗ ಆಮೇಲೆ ಆರು ವರ್ಷಗಳ ಹಿಂದೆ ಹೀಗೆ ಮನೆಯಿಂದ ಹೋದವ ಮತ್ತೆ ವಾಪಸಾಗಿಲ್ಲ ಎಂದು ದಂಪತಿ ಅವಲತ್ತುಕೊಂಡಿದ್ದಾರೆ.

Advertisements