ಬೈಕ್ ಸವಾರನಿಗೆ ಗಾಯ

Posted on April 14, 2011

0


ಕಾರ್ಕಳ: ನಗರದ ರಾಘವೇಂದ್ರ ಮಠ ಬಳಿಯಲ್ಲಿ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಬೈಕ್‌ಗಳೆಡರ ಸವಾರರು ಗಾಯಗೊಂಡು ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ.

ಮಿಯ್ಯಾರಿನ ರಮೇಶ್(೩೪) ಎಂಬವರು ಮನೆಯಿಂದ ರಾಘವೇಂದ್ರ ಮಠ ಮಾರ್ಗವಾಗಿ ಕಾರ್ಕಳಕ್ಕೆ ಬರುತ್ತಿ ದ್ದಾಗ ಎದುರುಗಡೆಯಿಂದ ಬಂದ ಬೈಕ್ ಡಿಕ್ಕಿಹೊಡೆದಿತ್ತು. ಪರಿಣಾಮವಾಗಿ ಇಬ್ಬರು ಬೈಕ್ ಸವಾರರು ಗಾಯಗೊಂ ಡಿದ್ದಾರೆ. ರಮೇಶ್ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರೆ, ಮತ್ತೊಂದು ಬೈಕ್ ಸವಾರರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisements
Posted in: Crime News