ನೀರಿನ ಸಮಸ್ಯೆ: ಇಳಂತಿಲ ಗ್ರಾಮಸ್ಥರ ಪ್ರತಿಭಟನೆ

Posted on April 14, 2011

0


ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಇಳಂತಿಲ ಗ್ರಾಮದ ಕಡವಿನ ಬಾಗಿಲು ಎಂಬಲ್ಲಿ ಕೆಲವು ದಿನಗಳಿಂದ ಕುಡಿ ಯುವ ನೀರಿನ ಸಮಸ್ಯೆ ಉಂಟಾಗಿದ್ದು ಸ್ಥಳೀಯ ಗ್ರಾಮ ಪಂಚಾಯತಿಗೆ ದೂರು ನೀಡಿದರೂ ನಿರ್ಲಕ್ಷ್ಯ ವಹಿಸುತ್ತಿ ದ್ದಾರೆ ಎಂದು ಆರೋಪಿಸಿದ ಗ್ರಾಮ ಸ್ಥರು ಗ್ರಾಮದ ರಸ್ತೆ ತಡೆಯುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.

ಕಡವಿನಬಾಗಿಲು ಎಂಬಲ್ಲಿ ಸುಮಾರು ಐದು ಲಕ್ಷ ವೆಚ್ಚದಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ನೀರಿನ ಟ್ಯಾಂಕಿ ನಿರ್ಮಿಸಿದ್ದು ಇದರ ಗುತ್ತಿಗೆದಾ ರರಿಗೆ ಇದರ ಕಾಮಗಾರಿ ವೆಚ್ಚವೂ ಪಾವತಿಯಾಗಿದ್ದು ಈ ಟ್ಯಾಂಕಿನಿಂದ ಇದುವರೆಗೂ ನೀರು ಬರಲಿಲ್ಲ ಎಂದು ಆರೋಪಿಸಿದ್ದ ಗ್ರಾಮಸ್ಥರು ಈ ಕ್ಷೇತ್ರ ವ್ಯಾಪ್ತಿಯ ಜಿಲ್ಲಾ ಪಂಚಾಯತ್ ಹಾಗೂ ಗ್ರಾಮಪಂಚಾಯತ್ ಪ್ರತಿನಿ ಧಿಗಳು ಟ್ಯಾಂಕಿ ನಿರ್ಮಾಣದಲ್ಲಿ ಅವ್ಯವ ಹಾರ ನಡೆಸಿದ್ದಾರೆ ಎಂಬ ವಿಚಾ ರವನ್ನು ಬಹಿರಂಗ ಪಡಿಸಿದ ಗ್ರಾಮ ಸ್ಥರು, ಸ್ಥಳಿಯವಾಗಿರುವ ಸರಕಾರಿ ಬಾವಿ ಕೂಡ ನಾದುರಸ್ಥಿಯಲ್ಲಿದ್ದು, ಇದರ ನೀರು ಕೂಡ ಕಲುಷಿತಗೊಂ ಡಿದೆ. ಈ ಪರಿಸರವು ನೇತ್ರಾವತಿ ನದಿಗೆ ತಾಗಿಕೊಂಡಿದ್ದು ನದಿ ನೀರನ್ನು ಕುಡಿಯಲು ಅಸಾಧ್ಯವಾಗಿದೆ. ನದಿಗೆ ಪೇಟೆಯ ತ್ಯಾಜ ವಸ್ತುಗಳನ್ನು ಎಸೆ ಯುವ ಮೂಲಕ ನದಿ ನೀರು ಕಲುಷಿ ತಗೊಂಡಿದೆ. ಕುಡಿಯುವ ನೀರಿನ ಸಮಸ್ಯೆಯಿಂದಾಗಿ ಈ ಪರಿಸರದ ಮಂದಿ ಕೂಲಿನಾಲಿ ಮಾಡಿ ಬದುಕು ವರಾಗಿದ್ದು, ಈ ಪರಿಸ್ಥಿಯಲ್ಲಿ ನೀರಿ ಗಾಗಿ ಅರ್ಧ ದಿನವನ್ನು ಕಳೆಯಬೇ ಕಾಗಿದೆ. ಇದರಿಂದ ಆಕ್ರೂಶಗೊಂಡ ಗ್ರಾಮ ಸ್ಥರು ಪಂಚಾಯತ್ ರಸ್ತೆಯನ್ನು ಪ್ರತಿಭಟನೆ ಮಾಡುವ ಮೂಲಕ ತಮ್ಮ ಅಹವಾಲನ್ನು ಬಹಿರಂಗ ಪಡಿಸಿದ್ದಾರೆ.

ಟ್ಯಾಂಕಿ ನಿರ್ಮಾಣ ಕುರಿತಾದ ಅವ್ಯವಹಾರದ ತನಿಖೆ ಹಾಗೂ ನೀರಿನ ಸಮಸ್ಯೆ ಬಗೆಹರಿಯದಿದ್ದಲ್ಲಿ ಉಪ್ಪಿನಂ ಗಡಿ ಗುರುವಾಯನಕೆರೆ ರಸ್ತೆ ತಡೆ ಮಾಡುವ ಮೂಲಕ ಉಗ್ರ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿ ಸಿದ್ದಾರೆ.

Advertisements